ಪೇಂಟ್ ಕೇಳುವ ನೆಪದಲ್ಲಿ ಅಂಗಡಿಗೆ ಬಂದ ಅಪರಿಚಿತರಿಬ್ಬರು ವೃದ್ಧೆಯ 35 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವು ಮಾಡಿರುವ ಘಟನೆ ಪಟ್ಟಣದ ಗೆಂಡೇಹಳ್ಳಿ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಮಾಲೀಕ ರಮೇಶ್ ಅವರ ತಾಯಿ ಲಕ್ಷ್ಮಮ್ಮ ಅಂಗಡಿಯಲ್ಲಿದ್ದ ಸಂದರ್ಭ ಇಬ್ಬರು ವ್ಯಕ್ತಿಗಳು ಬೈಕ್‌ನಲ್ಲಿ ಬಂದು ವ್ಯಾಪಾರ ನಡೆಸುವಂತೆ ನಟಿಸಿದ್ದಾರೆ.
ವೃದ್ಧೆ ಹಾಕಿಕೊಂಡಿದ್ದ ಮಾಂಗಲ್ಯ ಸರ ಚೆನ್ನಾಗಿದೆ, ನೋಡಿ ಕೊಡುತ್ತೇನೆ ಎಂದು ಕೇಳಿದ್ದಾರೆ. ತಕ್ಷಣವೇ ಚಿನ್ನದ ಸರದೊಂದಿಗೆ ಆರೋಪಿಗಳು ಬೈಕ್ ಹತ್ತಿ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಅಂಗಡಿ, ಮನೆಗಳ ಸಮೀಪ ಅಪರಿಚಿತ ವ್ಯಕ್ತಿಗಳು ಬಂದ ಸಂದರ್ಭ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು