ಮರೆಯಾಗುತ್ತಿವೆ ಕಸಾಪದ ತತ್ವ, ಉದ್ದೇಶ

ಹಾಸನದ ಸಾಹಿತ್ಯ ಬಳಗದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಕಲ್ಯಾಣ ಕಿರಣ ಶಾಂತರಸರ 101ನೇ ಜನ್ಮದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಚಲಂ ಹಡ್ಲಹಳ್ಳಿ,  ಬಿ.ಎನ್.ರಾಮಸ್ವಾಮಿ, ರವಿ ನಾಕಲಗೂಡು, ಚೆನ್ನೇನಹಳ್ಳಿ ಸ್ವಾಮಿ ಇತರರಿದ್ದರು.
ಹಾಸನದ ಸಾಹಿತ್ಯ ಬಳಗದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಕಲ್ಯಾಣ ಕಿರಣ ಶಾಂತರಸರ 101ನೇ ಜನ್ಮದಿನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಹಿತಿ ಚಲಂ ಹಡ್ಲಹಳ್ಳಿ, ಬಿ.ಎನ್.ರಾಮಸ್ವಾಮಿ, ರವಿ ನಾಕಲಗೂಡು, ಚೆನ್ನೇನಹಳ್ಳಿ ಸ್ವಾಮಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • kasapa
ಹಾಸನ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಯಾವ ಉದ್ದೇಶಗಳಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರೋ ಆ ತತ್ವಗಳು ಇಂದು ಮರೆಯಾಗುತ್ತಿವೆ ಎಂದು ಸಾಹಿತಿ ಚಲಂ ಹಡ್ಲಹಳ್ಳಿ ಆತಂಕ ವ್ಯಕ್ತಪಡಿಸಿದರು.
ಸಾಹಿತ್ಯ ಬಳಗದ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕಿರಣ ಶಾಂತರಸರ 101ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಂತರಸರಂತಹ ಹೋರಾಟಗಾರರು 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ತತ್ವನಿಷ್ಠತೆಯನ್ನು ಪ್ರದರ್ಶಿಸಿದ್ದನ್ನು ಸ್ಮರಿಸಿದ ಅವರು, ಇಂದಿನ ಸಾಹಿತ್ಯಿಕ ಸಂಘಟನೆಗಳು ಆ ಬದ್ಧತೆಯನ್ನು ಕಳೆದುಕೊಂಡಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಕಸಾಪ ಮಾಜಿ ಅಧ್ಯಕ್ಷ ಬಿ.ಎನ್.ರಾಮಸ್ವಾಮಿ ಮಾತನಾಡಿ, ಸಾಹಿತ್ಯ ಮತ್ತು ಸಂಘಟನೆ ಒಂದು ನಾಣ್ಯದ ಎರಡು ಮುಖಗಳು. ಸಾಹಿತ್ಯದ ತೇರನ್ನು ಎಳೆಯಲು ಅಧಿಕಾರಕ್ಕಿಂತ ಕನ್ನಡದ ಬಗ್ಗೆ ಇರುವ ನಿಷ್ಠೆ ಮುಖ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ರವಿ ನಾಕಲಗೂಡು ಮಾತನಾಡಿ, ಶೀಘ್ರದಲ್ಲೇ ಹಾಸನದ ಹಿರಿಯ ಸಾಹಿತಿಗಳು ಹಾಗೂ ಸಂಘಟಕರನ್ನು ಒಂದೇ ವೇದಿಕೆಗೆ ತರಲು ಪ್ರಯತ್ನಿಸಲಾಗುವುದು ಎಂದರು.
ಸಾಹಿತಿಗಳಾದ ಚೆನ್ನೇನಹಳ್ಳಿ ಸ್ವಾಮಿ ಮಾತನಾಡಿ, ಶಾಂತರಸರು ಕಲ್ಯಾಣ ಕರ್ನಾಟಕದಲ್ಲಿ ಕುವೆಂಪು ಅವರಂತೆ ಸಾಹಿತ್ಯಿಕ ಚಳವಳಿ ರೂಪಿಸಿದವರು. ಕನ್ನಡ ಗಜಲ್ ಸಾಹಿತ್ಯಕ್ಕೆ ಅವರು ಹಾಕಿದ ಅಡಿಪಾಯ ಮತ್ತು ಸಾಮಾಜಿಕ ಚಿಂತನೆಗಳು ಇಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.
ಸಾಹಿತಿ ಕೊಟ್ರೇಶ್ ಉಪ್ಪಾರ್, ಸುರೇಶ್ ಗುರೂಜಿ, ವಾಸು, ಗೊರೂರು ಅನಂತರಾಜು, ದೇಸಾಯಿ, ಯಲಗುಂದ ಶಾಂತಕುಮಾರ್, ಹರೀಶ್ ಮಳಲಿ (ಬನಾಮ್ ಲೋಕೇಶ್), ಉಪನ್ಯಾಸಕ ಪ್ರಕಾಶ್, ಬ್ಯಾಂಕ್ ಪರಮೇಶ್, ಮಹಾಂತೇಶ್, ವಿಜಯಕುಮಾರ್, ಬಸವರಾಜ್, ಶಿಕ್ಷಕ ಸೋಮಶೇಖರ್, ಕೆ.ಟಿ. ಜಯಶ್ರೀ, ಶಿಕ್ಷಕಿ ಗಿರಿಜಾ ನಿರ್ವಾಣಿ, ರಘುನಂದನ್, ಉದಯರವಿ, ಬುನಳ್ಳಿ ಬಾಲು, ದೇವರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net