ನಗರಸಭೆಯಿಂದ ನಾಲ್ವರು ಗಣತಿದಾರರಿಗೆ ಅಭಿನಂದನೆ

ಗಣತಿದಾರರಿಗೆ ಅರಸೀಕೆರೆ ನಗರಸಭೆ ಆಡಳಿತ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕೃಷ್ಣಮೂರ್ತಿ, ದಯಾನಂದ್, ರಾಜಶೇಖರ್, ಜಮೀಲ್ ಇತರರಿದ್ದರು.
ಗಣತಿದಾರರಿಗೆ ಅರಸೀಕೆರೆ ನಗರಸಭೆ ಆಡಳಿತ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಕೃಷ್ಣಮೂರ್ತಿ, ದಯಾನಂದ್, ರಾಜಶೇಖರ್, ಜಮೀಲ್ ಇತರರಿದ್ದರು.
Published on
ಅರಸೀಕೆರೆ: ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮನೆಗಣತಿ ಕಾರ್ಯವನ್ನು ನಿಗದಿತ ಅವಧಿಗೂ ಮುನ್ನವೇ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಗಣತಿದಾರರನ್ನು ನಗರಸಭೆ ಆಡಳಿತ ವತಿಯಿಂದ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಒಟ್ಟು 31ವಾರ್ಡ್‌ಗಳನ್ನು 99 ಬ್ಲಾಕ್‌ಗಳನ್ನಾಗಿ ವಿಂಗಡಿಸಲಾಗಿದ್ದು, ಬ್ಲಾಕ್ ಕ್ರಮ ಸಂಖ್ಯೆ 5ರ ಶುಭಾ, 11ರ ಮಂಜುನಾಥ್, 56ರ ಮೋಹನ್ ನಾಯಕ ಮತ್ತು 65 ನೇ ಬ್ಲಾಕ್ ಗಣತಿದಾರರಾದ ಮಂಜುನಾಥ್ ಅವರಿಗೆ ನೀಡಲಾಗಿದ್ದ ಮನೆ ಗಣತಿ ಕಾರ್ಯವನ್ನು ಅವಧಿಗೂ ಮುನ್ನವೇ ಪೂರ್ಣಗೊಳಿಸಿದ್ದಾರೆ.
ಪೌರಾಯುಕ್ತ ಹಾಗೂ ನೋಡಲ್ ಅಧಿಕಾರಿ ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿ, ಏ.15ರಿಂದ ಮೇ 15 ರವರೆಗೆ ಜನಗಣತಿ ಪೂರಕವಾಗಿ ಮನೆಗಣತಿ ಈಗಾಗಲೇ ಕಾರ್ಯ ಪ್ರಾರಂಭವಾಗಿದೆ.
ಶಿಕ್ಷಕರು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಈಗಾಲೇ ಮನೆಗಣತಿ ಕಾರ್ಯದಲ್ಲಿ ಭಾಗಿಯಾಗಿ ಶೇ.50 ರಷ್ಟು ಪೂರೈಸಿದ್ದಾರೆ. ಈಗಾಗಲೇ 31ವಾರ್ಡ್‌ಗಳನ್ನು 17 ಬ್ಲಾಕ್ ಗಳನ್ನಾಗಿ ವಿಂಗಡಿಸಿ ಪ್ರತಿ ಬ್ಲಾಕ್ ಗೆ ಒಬ್ಬರಂತೆ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ. ಪ್ರತಿ ಮೇಲ್ವಿಚಾರಕರಿಗೆ ತಲಾ 6 ಬ್ಲಾಕ್‌ಗಳ ಜವಾಬ್ದಾರಿ ನೀಡಲಾಗಿದ್ದು, 99 ಗಣತಿದಾರರ ಮೇಲುಸ್ತುವಾರಿ ವಹಿಸಿದ್ದಾರೆ. 5 ಬ್ಲಾಕ್‌ಗಳ ಗಣತಿದಾರರಿಗೆ ನೀಡಲಾಗಿದ್ದ ಮನೆಗಣತಿ ಸೇವಾ ಜವಾಬ್ದಾರಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಾರೆ. ಗಣತಿದಾರರು ಕೊಟ್ಟಿರುವ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತಿದ್ದು, ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಮೇಲಧಿಕಾರಿಗಳ ಮಾರ್ಗದರ್ಶನ, ಸೂಚನೆ ಸಲಹೆ ಮೇರೆಗೆ ಗಣತಿ ಕೆಲಸಕ್ಕೆ ವೇಗ ನೀಡಲಾಗಿದೆ. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಮಾರ್ಗದರ್ಶನ ಮಾಡಲಾಗಿದ್ದು, ಗಣತಿದಾರರೇ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಸ್ಪರ ಸಮಾಲೋಚಿಸಿ ಬಗೆಹರಿಸಿಕೊಳ್ಳುತ್ತಿದ್ದಾರೆ. ನಗರದ ಜನತೆ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಸಹಕಾರ ನೀಡುವುದರೊಂದಿಗೆ ಪೂರಕ ಮನೆಗಣತಿಗೆ ಕಾರ್ಯಕ್ಕೆ ಕೈ ಜೋಡಿಸಬೇಕು. ಇದು ದೇಶದ ಸೇವಾ ಕಾರ್ಯವಾಗಿರುವುದರಿಂದ ಎಲ್ಲರೂ ಪರಸ್ಪರ ಸಹಕರಿಸಿ ಯಶಸ್ವಿಗೊಳಿಸೋಣ ಎಂದರು.
ಜನಗಣತಿ ಮೇಲ್ವಿಚಾರಕ ಎಂ.ಎಚ್. ರಾಜಶೇಖರ್, ವಿಷಯ ನಿರ್ವಾಹಕ ಜಮೀಲ್, ಕೆ.ಆರ್. ದಯಾನಂದ್, ತ್ರಿಮೂರ್ತ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net