ತಂದೆಯ ಯಶಸ್ಸಿಗೆ ತಾಯಿಯೇ ಕಾರಣ

ಶಾಸಕ ಎಚ್ ಡಿ ರೇವಣ್ಣ..
ಶಾಸಕ ಎಚ್ ಡಿ ರೇವಣ್ಣ..
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್ ಡಿ ರೇವಣ್ಣ ಹೇಳಿಕೆ
ಹೊಳೆನರಸೀಪುರ: ರಾಜಕೀಯ ಕ್ಷೇತ್ರದಲ್ಲಿ ನಮ್ಮ ತಂದೆಯ ಯಶಸ್ಸು ಹಾಗೂ ನಮ್ಮ ಕುಟುಂಬದ ಏಳಿಗೆಗೆ ನಮ್ಮ ತಾಯಿ ಅವರ ಪೂಜಾ ಫಲ ಹಾಗೂ ಆಶೀರ್ವಾದವೇ ಕಾರಣ ಎಂದು ಶಾಸಕ ಎಚ್ ಡಿ ರೇವಣ್ಣ ಅವರು ಮಾತೃ ದಿವಂಗತ ಚೆನ್ನಮ್ಮ ಅವರನ್ನು ನೆನೆದು ಭಾವುಕರಾದರು.
ಪಟ್ಟಣದ ಅವರ ಸ್ವಗೃಹದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಟುಂಬದ ರಕ್ಷಣೆಗೆ ಸದಾ ಭಗವಂತನ ಮೊರೆ ಹೋಗುತ್ತಿದ್ದರು. ವ್ರತಗಳನ್ನು ಆಚರಿಸುತ್ತಾ ಈಶ್ವರ, ರಂಗನಾಥ ಸ್ವಾಮಿ, ವೆಂಕಟರಮಣ ಸ್ವಾಮಿ, ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನಗಳಿಗೆ ಪ್ರತಿವರ್ಷ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದರು.
ಮಹಾಶಿವರಾತ್ರಿದಿನ ಉಪವಾಸವಿದ್ದು ಜಾಗರಣೆ ಮಾಡುತ್ತಿದ್ದರು. ಎಂಬ ನೆನಪುಗಳನ್ನು ಭಾವುಕರಾಗಿಯೇ ಹಂಚಿಕೊಂಡರು.
ಆಸಿಡ್ ದಾಳಿ ಪ್ರಕರಣವನ್ನು ನೆನೆದು ದುಃಖಿಸಿದರು. ನನ್ನ ಅಮ್ಮ ಹಾಗೂ ನನ್ನ ಪತ್ನಿ ಈಶ್ವರನ ಸನ್ನಿಧಾನಕ್ಕೆ ಮೊದಲೇ ತೆರೆಳಿದ್ದರು. ನನ್ನ ಮೇಲೆ ನಡೆಯಬೇಕಿದ್ದ ಆಸಿಡ್ ದಾಳಿಯಲ್ಲಿ ನನ್ನ ಅಮ್ಮ ಸಿಲುಕಿದರು. ಈ ನೋವು ನನ್ನಲ್ಲಿ ಇನ್ನೂ ಕಾಡುತ್ತಿದೆ. ದೈವ ಸ್ವರೂಪಿಯಾಗಿ ನನ್ನನ್ನು ಅಂದು ಕಾಪಾಡಿದ್ದಾರೆ ಎನಿಸುತ್ತಿದೆ ಎಂದರು. ರಾಜ್ಯದ ಜನತೆ ಅಭೂತಪೂರ್ವ ವಾಗಿ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಆಗಸ್ಟ್ 30ರಂದು ನಡೆಯುವ ಅಮ್ಮನವರ ಕಾರ್ಯಕ್ಕೆ ಎಲ್ಲರೂ ಭಾಗವಹಿಸಬೇಕೆಂದು ಕೋರಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net