ಭೂ ಸುಧಾರಣಾ ಕಾಯ್ದೆ ಸದಾ ಸ್ಮರಣೀಯ

ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ತಹಸೀಲ್ದಾರ್ ರೇಣು ಕುಮಾರ್, ಮುನಿರಾಜು, ಸೋಮಲಿಂಗೇಗೌಡ, ಕುಮಾರ್, ಸುರೇಶ್ ಮತ್ತಿತರರಿದ್ದರು.
ಹೊಳೆನರಸೀಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ತಹಸೀಲ್ದಾರ್ ರೇಣು ಕುಮಾರ್, ಮುನಿರಾಜು, ಸೋಮಲಿಂಗೇಗೌಡ, ಕುಮಾರ್, ಸುರೇಶ್ ಮತ್ತಿತರರಿದ್ದರು.
Published on

ಹೊಳೆನರಸೀಪುರ:

ದೀನ ದಲಿತರ, ಹಿಂದುಳಿದ ವರ್ಗಗಳ ಹಾಗೂ ಶೋಷಿತರ ಏಳಿಗೆಗಾಗಿ ದೇವರಾಜ ಅರಸು ಅವರು ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಮತ್ತು ಭೂಸುಧಾರಣಾ ಕಾಯ್ದೆಗಳು ಸದಾ ಸ್ಮರಣೀಯ ಎಂದು ತಹಸಿಲ್ದಾರ್ ವೈ.ಎಂ. ರೇಣು ಕುಮಾರ್ ಹೇಳಿದರು.

ತಾಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಪುರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು. ಅರಸು ಅವರು ಆಡಳಿತ ಅವಧಿಯಲ್ಲಿ ಹಿಂದುಳಿದ ವರ್ಗಗಳಿಗೆ ಜಾರಿಗೆ ತಂದ ಯೋಜನೆಗಳು ಸದಾ ಸ್ಮರಣೀಯ ಎಂದರು.
ಸರ್ಕಾರಿ ಕಾರ್ಯಕ್ರಮಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ತಹಸೀಲ್ದಾರ್, ರಾಷ್ಟ್ರೀಯ ಹಬ್ಬಗಳಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪ್ರಾಂಶುಪಾಲ ಕುಮಾರ್ ಮಾತನಾಡಿ, ಅರಸು ಅವರು ಸೇನಾ ಹುದ್ದೆ ಹಾಗೂ ಸರ್ಕಾರಿ ನೌಕರಿಗಳ ಆಹ್ವಾನ ತ್ಯಜಿಸಿ ಕೃಷಿ ಜೀವನ ಆಯ್ದುಕೊಂಡರು. ನಂತರ ಜನರ ಒತ್ತಾಯದ ಮೇರೆಗೆ ರಾಜಕೀಯ ಪ್ರವೇಶಿಸಿ ಉಳುವವನೇ ಭೂಮಿಯ ಒಡೆಯ, ಭೂಸುಧಾರಣೆ ಮತ್ತು ಹಾವನೂರು ವರದಿ ಮೂಲಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಂದುಕೊಟ್ಟು ಸಾಮಾಜಿಕ ನ್ಯಾಯದ ಹರಿಕಾರರಾದರು ಎಂದು ಬಣ್ಣಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮುನಿರಾಜು, ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೈರಯ್ಯ, ಪಶು ಸಂಗೋಪನ ಇಲಾಖೆ ಅಧಿಕಾರಿ ತಿಪ್ಪೆಸ್ವಾಮಿ, ಉಪನೋಂದಣಾಧಿಕಾರಿ ರಾಕೇಶ್, ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ದೇವರಾಜು, ನಿಲಯ ಮೇಲ್ವಿಚಾರಕ ಹರೀಶ್, ತ್ರಿವೇಣಿ, ಜ್ಞಾನೇಶ್ವರಿ, ಸೌಮ್ಯಾ, ತಾಸಿನ, ದೊಡ್ಡಶೆಟ್ಟಿ, ಚಂದ್ರಯ್ಯ, ವೇದಾವತಿ, ಇಂದ್ರಮ್ಮ, ವಿವಿಧ ಇಲಾಖೆ ನೌಕರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net