ಸರ್ಕಾರ ರೈತರ ಸಾಲಮನ್ನಾ ಮಾಡಲಿ

ಕಾಮನಾಯಕನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ವತಿಯಿಂದ ಎಫ್‌ಎನ್‌ಎಸ್ ಯೋಜನೆಯಡಿ ಗ್ರಾಮದ ಫಲಾನುಭವಿ ರೈತರಿಗೆ ರಾಗಿ ಮತ್ತು ಇತರೆ ಪರಿಕರಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ವಿತರಿಸಿದರು. ಶಿವಣ್ಣ, ಬಸವರಾಜ್, ರಕ್ಷಿತ್ ನಾಯಕ್, ರಂಗನಾಥ್, ನಾಗೇಶ್, ದೇವರಾಜ್, ಕುಮಾರ್, ವೀಣಾ ಇದ್ದರು.
ಕಾಮನಾಯಕನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ವತಿಯಿಂದ ಎಫ್‌ಎನ್‌ಎಸ್ ಯೋಜನೆಯಡಿ ಗ್ರಾಮದ ಫಲಾನುಭವಿ ರೈತರಿಗೆ ರಾಗಿ ಮತ್ತು ಇತರೆ ಪರಿಕರಗಳನ್ನು ಶಾಸಕ ಸಿ.ಎನ್. ಬಾಲಕೃಷ್ಣ ವಿತರಿಸಿದರು. ಶಿವಣ್ಣ, ಬಸವರಾಜ್, ರಕ್ಷಿತ್ ನಾಯಕ್, ರಂಗನಾಥ್, ನಾಗೇಶ್, ದೇವರಾಜ್, ಕುಮಾರ್, ವೀಣಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • farmers' loans

ಬಾಗೂರು: ಕುಡಿಯುವ ಉದ್ದೇಶಕ್ಕಾಗಿ ಹಾಸನ, ಮಂಡ್ಯ, ತುಮಕೂರು ಜಿಲ್ಲೆಯ ನಾಲೆಗಳಿಗೆ ಒಂದು ತಿಂಗಳು ಹೇಮಾವತಿ ಡ್ಯಾಮ್ ನಿಂದ ನೀರು ಹರಿಸಬೇಕು ಎಂದು ಜಿಲ್ಲಾಡಳಿತಕ್ಕೆ ಶಾಸಕ ಸಿ.ಎನ್. ಬಾಲಕೃಷ್ಣ ಮನವಿ ಮಾಡಿದರು.

ಕೃಷಿ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರ ವತಿಯಿಂದ ಹೋಬಳಿಯ ಕಾಮನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಎ್ಎನ್‌ಎಸ್ ಯೋಜನೆಯಡಿ ಗ್ರಾಮದ ಫಲಾನುಭವಿ ರೈತರಿಗೆ ರಾಗಿ ಮತ್ತು ಇತರ ಪರಿಕರ ವಿತರಿಸಿ ಅವರು ಮಾತನಾಡಿದರು. ಚನ್ನರಾಯಪಟ್ಟಣ ತಾಲೂಕಿನಲ್ಲಿ ವಾಡಿಕೆಯಂತೆ ಈ ಬಾರಿ ಮಳೆಯಾಗಿಲ್ಲ. ಹೀಗಾಗಿ ತಾಲೂಕನ್ನು ಬರಪಟ್ಟಿಗೆ ಸೇರಿಸಬೇಕು. ರೈತರ ಸಾಲ ಮನ್ನಾ ಮಾಡಬೇಕು ಎಂದು ಜಿಲ್ಲಾ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಒಂದು ಎಕರೆ ರಾಗಿ ಬೆಳೆಗೆ 404 ರೂ. ಕೊಟ್ಟು ವಿಮೆ ಮಾಡಿಸಿದರೆ ಎಕರೆಗೆ ಕನಿಷ್ಠ 19 ಸಾವಿರ ರೂ. ಪರಿಹಾರ ಸಿಗುತ್ತದೆ. ವಿಮೆ ಪಾವತಿಸಲು ಆ. 14 ಕೊನೆಯ ದಿನವಾಗಿದೆ ಎಂದು ತಿಳಿಸಿದರು.
ಕಾಮನಾಯಕನಹಳ್ಳಿ ಗ್ರಾಮದ 87 ಹೆಕ್ಟೇರ್ ಪ್ರದೇಶದ 250 ಫಲಾನುಭವಿ ರೈತರಿಗೆ ವಿವಿಧ ಕೃಷಿ ಪರಿಕರಗಳು ಪ್ರೋತ್ಸಾಹ ಧನ ವಿತರಿಸಲಾಗುವುದು. ಕೆಎಂಆರ್ 316 ತಳಿಯ ರಾಗಿ 100 ದಿನಕ್ಕೆ ಕಟಾವಿಗೆ ಬರುತ್ತದೆ. ಎಕರೆಗೆ 12 ಕ್ವಿಂಟಲ್ ವರೆಗೆ ಇಳುವರಿ ನಿರೀಕ್ಷೆ ಮಾಡಬಹುದು. ಹೀಗಾಗಿ ರೈತರು ಈ ಬಗ್ಗೆ ಗಮನ ನೀಡಬೇಕು ಎಂದರು.
ಕೃಷಿ ಅಧಿಕಾರಿ ಎಚ್.ಎಸ್. ರಕ್ಷಿತ್ ನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್. ಶಿವಣ್ಣ, ತಾಪಂ ಮಾಜಿ ಸದಸ್ಯ ಓಬಳಾಪುರ ಎನ್. ಬಸವರಾಜ್, ಮಂಜುನಾಥ್, ಪುರೋಹಿತ್, ಸಿ.ಪಿ. ರಂಗನಾಥ್, ದೇವರಾಜು, ಕಾಂತರಾಜ್, ತಮ್ಮಯ್ಯಣ್ಣ, ಲೋಕೇಶ್, ನಾಗೇಶ್, ಶಂಕರ್, ಕೆ.ಪಿ. ಕುಮಾರ್, ದೇವರಾಜ್, ಪುಟ್ಟೇಗೌಡ, ಮಂಜುನಾಥ್, ದೇವೇಗೌಡ, ಚಂದ್ರಶೇಖರ್, ಕೃಷಿ ಇಲಾಖೆ ಸಿಬ್ಬಂದಿ ವೀಣಾ, ಬಸವರಾಜ್, ಕಾವ್ಯಾ, ಕಾರೆಕೆರೆ ಕೃಷಿ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net