ವಿಜೃಂಭಣೆಯ ಕೊರಗಜ್ಜನ ನೇಮೋತ್ಸವ

ತಾಲೂಕಿನ ಬಿಕ್ಕೋಡು ಸಮೀಪದ ಕಲಕ್ಕುಂದ-ದರ್‌ಬಾರ್ ಪೇಟೆ ಗ್ರಾಮದಲ್ಲಿ ಮಂತ್ರ ದೇವತೆ ಹಾಗೂ ಕೊರಗಜ್ಜನ ನೇಮೋತ್ಸವವು 2ನೇ ವರ್ಷದಲ್ಲಿ ನೆರವೇರಿತು
ತಾಲೂಕಿನ ಬಿಕ್ಕೋಡು ಸಮೀಪದ ಕಲಕ್ಕುಂದ-ದರ್‌ಬಾರ್ ಪೇಟೆ ಗ್ರಾಮದಲ್ಲಿ ಮಂತ್ರ ದೇವತೆ ಹಾಗೂ ಕೊರಗಜ್ಜನ ನೇಮೋತ್ಸವವು 2ನೇ ವರ್ಷದಲ್ಲಿ ನೆರವೇರಿತು
Published on
ಬೇಲೂರು : ಮಂತ್ರ ದೇವತೆ ಹಾಗೂ ಕೊರಗಜ್ಜನ ನೇಮೋತ್ಸವವು 2ನೇ ವರ್ಷದಲ್ಲಿ ತಾಲೂಕಿನ ಬಿಕ್ಕೋಡು ಸಮೀಪದ ಲಕ್ಕುಂ-ದರ್‌ಬಾರ್ ಪೇಟೆ ಗ್ರಾಮದಲ್ಲಿ ಭಕ್ತರ ಸಮ್ಮುಖದಲ್ಲಿ ದೈವ ಚಾಕರಿ ರವಿ ನೇತೃತ್ವದಲ್ಲಿ ಸೋಮವಾರ ರಾತ್ರಿ ಅದ್ದೂರಿಯಾಗಿ ನೆರವೇರಿತು.
ಮಂತ್ರ ದೇವತೆ ಹಾಗೂ ಕೊರಗಜ್ಜನ ನೇಮೋತ್ಸವ ಮನೆಯೊಳಗೆ ಪೂಜಿಸಲಾಗುತಿತ್ತು. ನೇಮೋತ್ಸವದ ಅಂಗವಾಗಿ ಮಂತ್ರ ದೇವತೆಯನ್ನು ಮನೆಯಿಂದ ಹೊರಗೆ ತಂದು ಹೂವಿನ ಅಲಂಕಾರದಿಂದ ಸಿಂಗರಿಸಿ ಭಕ್ತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಲಾಯಿತು. ನೇಮೋತ್ಸವದ ನಂತರ ಭಕ್ತರಿಗೆ ದೇವರು ದರ್ಶನ ನೀಡಿದ ನಂತರ ದೇವತೆಯನ್ನು ಮನೆಯೊಳಗೆ ಪುನಃ ಕೊಂಡೊಯ್ಯಲಾಯಿತು.
ನೇಮೋತ್ಸವದ ಸಂದರ್ಭ ಮಂತ್ರ ದೇವತೆಗೆ ಗಗ್ಗರ ಸೇವೆ ನಡೆಸಿದ ನಂತರ ಕೊರಗಜ್ಜನ ಗಗ್ಗರ ಸೇವೆ ನೆರವೇರಿಸಲಾಯಿತು. ತುಳು ನಾಡಿನ ಸಂಸ್ಕೃತಿಯ ಆಚರಣೆ, ಸಂಪ್ರದಾಯ ಹಾಗೂ ನರ್ತಕರ ನರ್ತನ ಸೇವೆಯನ್ನು ನೆರೆದಿದ್ದ ಭಕ್ತರು ವೀಕ್ಷಿಸಿದರು. ಮಂತ್ರ ದೇವತೆ ಹಾಗೂ ಕೊರಗಜ್ಜನ ಗಗ್ಗರ ಸೇವೆಯಲ್ಲಿ 7 ಮಂದಿ ತಾಸೆಯರು, ಇಬ್ಬರು ನರ್ತಕರು ಮಂಗಳೂರಿನಿಂದ ಆಗಮಿಸಿ ನೇಮೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ದೇವರ ನೇಮೋತ್ಸದ ಸಂದರ್ಭ ದೈವ ಚಾಕರಿ ರವಿ, ಬೇಬಿ, ಶಿವಪ್ಪ, ಆನಂದ, ರೇಖಾ, ಉಮೇಶ್, ಜಯಶ್ರೀ, ಅಜಿತ್, ಹಿರಿಯರಾದ ಗಂಗು ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net