

ಹಾಸನ :
ಜಿಲ್ಲೆಯ ಮಲೆನಾಡು ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಯೋಜನೆಯಾಗಿದ್ದ ಸಕಲೇಶಪುರ ತಾಲೂಕಿನ ಬೆಟ್ಟದ ಭೈರವೇಶ್ವರ ದೇವಾಲಯ ಸಮೀಪದ ವಾಚ್ ಟವರ್(ವೀಕ್ಷಣಾ ಗೋಪುರ) ಕಾಮಗಾರಿ ಎರಡು ದಶಕಗಳಿಂದ ಸ್ಥಗಿತಗೊಂಡಿದೆ.
ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಗಳ ಸಮನ್ವಯದ ಕೊರತೆಯಿಂದ ಪ್ರಮುಖ ಪ್ರವಾಸಿ ತಾಣ ರೂಪುಗೊಳ್ಳುವ ನನಸಾಗದೆ ಉಳಿದಿದೆ.