ದೇವಾಲಯಗಳು ಧಾರ್ಮಿಕ ನಂಬಿಕೆ ಕೇಂದ್ರ

ಶ್ರೀ ಮಾರಮ್ಮ ದೇವಿಯ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಜೀರ್ಣೋದ್ಧಾರ ಸಮಿತಿ ಸದಸ್ಯರುಗಳು ಸನ್ಮಾನಿಸಿದರು. ನಾಗರಾಜ್, ದೊರೆಸ್ವಾಮಿ, ರಂಗಸ್ವಾಮಿ, ದೇವರಾಜ್, ವಿಟಲ್ ಕುಮಾರ್, ಸಂಪತ್ ಕುಮಾರ್, ರಮೇಶ್, ಕೃಷ್ಣಮೂರ್ತಿ, ಮಂಜುನಾಥ್, ಇದ್ದರು.
ಶ್ರೀ ಮಾರಮ್ಮ ದೇವಿಯ ದೇವಾಲಯದ ನೂತನ ವಿಗ್ರಹ ಪ್ರತಿಷ್ಠಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರನ್ನು ಜೀರ್ಣೋದ್ಧಾರ ಸಮಿತಿ ಸದಸ್ಯರುಗಳು ಸನ್ಮಾನಿಸಿದರು. ನಾಗರಾಜ್, ದೊರೆಸ್ವಾಮಿ, ರಂಗಸ್ವಾಮಿ, ದೇವರಾಜ್, ವಿಟಲ್ ಕುಮಾರ್, ಸಂಪತ್ ಕುಮಾರ್, ರಮೇಶ್, ಕೃಷ್ಣಮೂರ್ತಿ, ಮಂಜುನಾಥ್, ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್. ಬಾಲಕೃಷ್ಣ ಅಭಿಪ್ರಾಯ
  • ದೇವಾಲಯ ಉದ್ಘಾಟನಾ
ನುಗ್ಗೇಹಳ್ಳಿ:

ಧಾರ್ಮಿಕ ಪರಂಪರೆಯಿಂದ ಮಾತ್ರ ಸಂಸ್ಕೃತಿ ಹಾಗೂ ಧರ್ಮ ಉಳಿಯಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಹೊಬಳಿಯ ಹೊನ್ನಮಾರನಹಳ್ಳಿ ಮಾರಮ್ಮ ದೇವಿಯ ನೂತನ ವಿಗ್ರಹ ಪ್ರತಿಷ್ಠಾನ ಹಾಗೂ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದದರು.
ದೇವಾಲಯಗಳು ಧಾರ್ಮಿಕ ನಂಬಿಕೆಯ ಕೇಂದ್ರಗಳಾಗಿದ್ದು, ಅವುಗಳ ಅಭಿವೃದ್ಧಿಗೆ ಸರ್ಕಾರಿದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಮಾರಮ್ಮ ದೇವಾಲಯ ನಿರ್ಮಾಣಕ್ಕಾಗಿ ಈಗಾಗಲೇ 3 ಲಕ್ಷ ರೂ., ಅನುದಾನ ನೀಡಲಾಗಿದೆ. ಇದರ ಜತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1ಲಕ್ಷ ರೂ., ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ದೇವಾಲಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಮದ ಕೆರೆಗಳನ್ನು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗುತ್ತದೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಸಾಕಾರಗೊಂಡಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದ್ದು, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ ಎಂದು ಹೇಳಿದರು.
ಟಿಎಪಿಎಂ ಎಸ್ ನಿರ್ದೇಶಕ ತೋಟಿ ನಾಗರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ರಂಗಸ್ವಾಮಿ, ಹುಲಿಕೆರೆ ಸಂಪತ್ ಕುಮಾರ್, ವೀರಶೈವ ಮುಖಂಡ ಎಂ.ಎಸ್. ಸುರೇಶ್, ಡಾಕ್ಟರ್ ನಾಗೇಶ್, ಶುಗರ್ ಫ್ಯಾಕ್ಟರಿ ರಮೇಶ್ ಮುಖಂಡರುಗಳಾದ ಮುರಳಿ, ಮಾಸ್ತಿಗೌಡ, ಜೆಸಿಬಿ ಶೇಖರ್, ಎನ್. ಎಸ್. ಮಂಜುನಾಥ್, ಬಸವನಪುರ ಪ್ರಕಾಶ್, ಗುಡಿ ಗೌಡ ಮಾಳಿಗಯ್ಯ, ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಮಂಜುನಾಥ್, ಭಕ್ತರು ಗ್ರಾಮಸ್ಥರು ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net