ಈ ಯೋಜನೆಯು 190 ಕೋಟಿ ರೂ. ವೆಚ್ಚದಲ್ಲಿ 200 ಕೆರೆಗಳಿಗೆ ನೀರು ತುಂಬಿಸುವುದಾಗಿದೆ. ಸುಮಾರು 78.10 ಕಿ.ಮೀ. ದೂರ ರೇಸಿಂಗ್ ಮೇನ್ ಪೈಪ್‌ಲೈನ್ ಕಾಮಗಾರಿ ಆಗಬೇಕಿದ್ದು, ಈಗಾಗಲೇ 70 ಕಿ.ಮೀ. ಕೆಲಸ ಪೂರ್ಣಗೊಂಡಿದೆ. ಬಾಕಿ 8 ಕಿ.ಮೀ. ಕಾಮಗಾರಿ ಇದ್ದು, ಕೂಡಲೇ ಪೂರ್ಣಗೊಳಿಸಬೇಕು ಎಂದು ಹಾರಂಗಿ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೀಪಕ್ ಅವರಿಗೆ ತಾಕೀತು ಮಾಡಿದರು.