ಸುಕ್ಷೇತ್ರ ಗಂಗೆಮಡು ಪ್ರವಾಸಿ ತಾಣವಾಗಿ ಅಭಿವೃದ್ಧಿ

 ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿ ಗ್ರಾಮದ ಸರಹದ್ದಿನಲ್ಲಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಸುಕ್ಷೇತ್ರ ಗಂಗೆಮಡು ನಿರ್ಮಾಣ ಹಂತದಲ್ಲಿರುವ ಗೋಪುರದ ಮುಂದೆ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಗಿರಿಗೌಡ, ಮೋಹನ್‌ಕುಮಾರ್, ಕುಬೇರ್, ನಾಗರಾಜ್, ರಮೇಶ್ ಇತರರಿದ್ದರು.
ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿ ಗ್ರಾಮದ ಸರಹದ್ದಿನಲ್ಲಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಸುಕ್ಷೇತ್ರ ಗಂಗೆಮಡು ನಿರ್ಮಾಣ ಹಂತದಲ್ಲಿರುವ ಗೋಪುರದ ಮುಂದೆ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಗಿರಿಗೌಡ, ಮೋಹನ್‌ಕುಮಾರ್, ಕುಬೇರ್, ನಾಗರಾಜ್, ರಮೇಶ್ ಇತರರಿದ್ದರು.
Published on
ಅರಸೀಕೆರೆ: ತಾಲೂಕಿನ ಗಂಡಸಿ ಹೋಬಳಿ ಗೊಲ್ಲರಹಳ್ಳಿ ಗ್ರಾಮದ ಸರಹದ್ದಿನಲ್ಲಿರುವ ಶ್ರೀ ಗಂಗಾಧರೇಶ್ವರಸ್ವಾಮಿ ಸುಕ್ಷೇತ್ರ ಗಂಗೆಮಡು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಎಲ್ಲರ ಸಹಕಾರದೊಂದಿಗೆ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಗಿರಿಗೌಡ ಹೇಳಿದರು.
ದೇಗುಲದ ಜೀರ್ಣೋದ್ಧಾರ ಸೇರಿದಂತೆ 30 ಎಕರೆ ಜಾಗದಲ್ಲಿ ನಡೆಯುತ್ತಿರುವ ವಿವಿಧ ಕಾರ್ಯಗಳ ಪರಿಶೀಲನೆ ನಡೆಸಿ ಶನಿವಾರ ಮಾತನಾಡಿದರು.
ಚಿಕ್ಕಮಗಳೂರು, ಮೈಸೂರು, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿದೆ. ಇದನ್ನು ಮನಗಂಡು ಕೆ.ಆರ್.ನಗರದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹಾಗೂ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರ ಸಹಕಾರ ಪಡೆದು ಶ್ರೀ ಗಂಗಾಧರೇಶ್ವರಸ್ವಾಮಿ ದೇಗುಲವನ್ನು ವಿನೂತನ ರೀತಿಯಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಇದಲ್ಲದೆ ಕನಕ ನೌಕರರ ಸಂಘದ ವತಿಯಿಂದ ಸ್ವಾಮೀಜಿ ವಿಶ್ರಾಂತಿ ಗೃಹ ಕಟ್ಟಲಾಗಿದೆ ಎಂದರು.
ಗೊಲ್ಲರಹಳ್ಳಿ ಗ್ರಾಮದ ಬಳಿ ಅಂದಾಜು ಒಂದು ಕೋಟಿ ರೂ.ವೆಚ್ಚದಲ್ಲಿ ಬೃಹತ್ ಪ್ರವೇಶ ದ್ವಾರದ ಕೆಲಸ ಪ್ರಗತಿಯಲ್ಲಿದೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಸವಾದಿ ಶಿವಶರಣರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕವಿರತ್ನ ಕಾಳಿದಾಸ, ಶ್ರೀ ಬೀರಲಿಂಗೇಶ್ವರ, ಶ್ರೀ ಗುರುಸಿದ್ದರಾಮೇಶ್ವರ, ಶ್ರೀ ರೇವಣ ಸಿದ್ದೇಶ್ವರ ದೇವರು ಹಾಗೂ ಚಾಮುಂಡೇಶ್ವರಿ ತಾಯಿ ವಿಗ್ರಹ ಸ್ಥಾಪನೆ ಮಾಡಲಿದ್ದೇವೆ. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಒಳಗೊಂಡಂತೆ ಸಮಾಜದ ಎಲ್ಲರ ಸಹಕಾರ ಪಡೆದು ಐತಿಹಾಸಿಕ ಪ್ರವಾಸಿ ತಾಣವಾಗಿ ಮಾರ್ಪಡಿಸಲು ಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.
ಬಿಇಒ ಮೋಹನ್‌ಕುಮಾರ್, ಸೋಮಶೇಖರ್, ಬಸವರಾಜು, ಕುಬೇರ್, ರಮೇಶ್, ನಾಗರಾಜ್ ಬೀರಲಿಂಗೇಗೌಡ, ಬಿ.ಪರಮೇಶ್, ರಂಗಸ್ವಾಮಿ, ಚಿದಾನಂದ, ಕುಮಾರ್, ಬೀರಲಿಂಗೇಗೌಡ, ದಾಸೇಗೌಡ, ಕೃಷ್ಣ, ದಿನೇಶ್, ಸತೀಶ್, ಚಂದ್ರೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net