ಹೆಂಡತಿಯೊಂದಿಗಿನ ವಿರಸ !

ಸಕಲೇಶಪುರದ ಹೆದ್ದಾರಿ ನಡುವೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಸಕಲೇಶಪುರದ ಹೆದ್ದಾರಿ ನಡುವೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
Published on
ಸಕಲೇಶಪುರ : ಪಟ್ಟಣದ ಕುಶಾಲನಗರ ಬಡಾವಣೆಯ ವ್ಯಕ್ತಿಯೊಬ್ಬ ಹೆಂಡತಿಯೊಂದಿಗಿನ ವಿರಸದಿಂದ ಬೇಸತ್ತು ಹೆದ್ದಾರಿಯಲ್ಲಿ ಮಲಗಿಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಶನಿವಾರ ಸಂಜೆ ಪಟ್ಟಣದಿಂದ ತಮ್ಮ ಮನೆಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಪತಿ -ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಪತಿ ರಾಜು ಎಂಬಾತ ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಸಮೀಪ ಆಟೋದಿಂದ ಇಳಿದುಕೊಂಡರು.
ನಂತರ ಹೆದ್ದಾರಿಯಲ್ಲಿ ಮಲಗಿ ಆತ್ಮಹತ್ಯೆಗೆ ಯತ್ನಿಸಿದರು. ಈತನ ವರ್ತನೆ ಕಂಡು ಕೆಲ ವಾಹನ ಚಾಲಕರು
ರಸ್ತೆ ಬದಿಗೆ ನಿಲುಗಡೆ ಮಾಡಿ ಪರಿಸ್ಥಿತಿ ವೀಕ್ಷಿಸಿದರು. ಸಮೀಪದ ಕ್ಯಾಂಟೀನ್ ನಲ್ಲಿದ್ದ ಗ್ರಾಹಕರು ಆಗಮಿಸಿ ವ್ಯಕ್ತಿಯನ್ನು ಎಬ್ಬಿಸಿ ವಿಚಾರಣೆ ನಡೆಸಿದಾಗ, ವ್ಯಾಪಾರಿಯಾಗಿರುವ ಆತ ಪತ್ನಿಯೊಂದಿಗಿನ ವಿರಸದಿಂದ ಬೇಸತ್ತಿದ್ದಾಗಿ ತಿಳಿಸಿದ. ಸಮಾಧಾನ ಹೇಳಿದ ಸಾರ್ವಜನಿಕರು, ಆತನನ್ನು ಆಟೋರಿಕ್ಷಾದಲ್ಲಿ ಮನೆಗೆ ಕಳುಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net