ವಾರದೊಳಗೆ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಸಲ್ಲಿಸಿ

ಇಬ್ಬೀಡು ಗ್ರಾಮಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಶನಿವಾರ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ರುದ್ರಭೂಮಿ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
ಇಬ್ಬೀಡು ಗ್ರಾಮಕ್ಕೆ ಜಿಲ್ಲಾಧಿಕಾರಿ ಲತಾಕುಮಾರಿ ಶನಿವಾರ ಭೇಟಿ ನೀಡಿದ ಸಂದರ್ಭ ಗ್ರಾಮಸ್ಥರು ರುದ್ರಭೂಮಿ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ
  • ಇಬ್ಬೀಡು ಗ್ರಾಮಸ್ಥರ ಮನವಿ ಆಲಿಸಿದರು
ಬೇಲೂರು: ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ದಶಕಗಳಿಂದ ರುದ್ರಭೂಮಿಯಲ್ಲಿರುವ ಮನೆಗಳ ಸಕ್ರಮ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೂಚಿಸಿದರು.
ತಾಲೂಕು ಪ್ರವಾಸ ಕೈಗೊಂಡಿದ್ದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಶನಿವಾರ ಗ್ರಾಮಸ್ಥರ ಮನವಿ ಆಲಿಸಿದರು. ನಂತರ ಮಾದಿಹಳ್ಳಿ ಹೋಬಳಿಯ ಇಬ್ಬೀಡು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸರ್ವೇ ನಂ.11 ರಲ್ಲಿ 2.12 ಎಕರೆ ಜಾಗದಲ್ಲಿ ರುದ್ರಭೂಮಿ ಎಂದು ನಮೂದಾಗಿದೆ. ಈ ಜಾಗದಲ್ಲಿ ನಲವತ್ತು ವರ್ಷಗಳಿಂದ ಗ್ರಾಮಸ್ಥರು ಹತ್ತಾರು ಮನೆಗಳನ್ನು ಕಟ್ಟಿಕೊಂಡಿದ್ದು, ಇದೀಗ ಗ್ರಾಮ ಅಭಿವೃದ್ಧಿಗೊಂಡಿದೆ. ದಶಕಗಳಿಂದ ಈ ಸಮಸ್ಯೆ ಜ್ವಲಂತವಾಗಿದ್ದು ಬದಲಿ ಸ್ಮಶಾನಕ್ಕೆ ಜಾಗ ಮೀಸಲಿಡಬೇಕು. ಈ ಜಾಗದಲ್ಲಿ ವಾಸಿಸುತ್ತಿರೋ ಮನೆಗಳಿಗೆ ಸಕ್ರಮಕ್ಕೆ ಕ್ರಮ ವಹಿಸಿ ಕಂದಾಯ ಗ್ರಾಮವೆಂದು ಮಾಡುವಂತೆ ಪ್ರಸ್ತಾವನೆಯನ್ನು ಒಂದು ವಾರದೊಳಗೆ ಸಲ್ಲಿಸಬೇಕೆಂದು ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರಿಗೆ ಸೂಚಿಸಿದರು.
ರುದ್ರಭೂಮಿ ಜಾಗದಲ್ಲಿ ಮನೆ ಕಟ್ಟೋದಕ್ಕೆ ಅವಕಾಶ ಕೊಟ್ಟ ಅಧಿಕಾರಿಗಳ ವಿರುದ್ಧವೂ ಕ್ರಮ ವಹಿಸುವಂತೆ ತಾಕೀತು ಮಾಡಿದರು. ತಾಲೂಕು ಪಂಚಾಯಿತಿ ಇಒ ಸತೀಶ್‌ಕುಮಾರ್, ಪಿಡಿಒ ರವಿಕುಮಾರ್, ಗ್ರಾಮಸ್ಥರಾದ ರಮೇಶ್, ಕೃಷ್ಣೇಗೌಡ, ಸುರೇಶ್, ಶರತ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net