ವಿದ್ಯಾರ್ಥಿಗಳಿಗೆ ಬಸ್‌ಪಾಸ್ ಸದ್ಬಳಕೆಯಾಗಲಿ

ಪಟ್ಟಣದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಘಟಕ ವ್ಯವಸ್ಥಾಪಕ ನಾಗರಾಜು ಖಾರ್ವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್  ವಿತರಿಸಿದರು. ಪುರುಷೋತ್ತಮ್, ಮಮತಾ, ನಾಗರತ್ನಾ, ದಿನೇಶ್ ಬೆಳ್ಳಾವರ ಇತರರು ಇದ್ದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಕಚೇರಿಯಲ್ಲಿ ಘಟಕ ವ್ಯವಸ್ಥಾಪಕ ನಾಗರಾಜು ಖಾರ್ವಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಿದರು. ಪುರುಷೋತ್ತಮ್, ಮಮತಾ, ನಾಗರತ್ನಾ, ದಿನೇಶ್ ಬೆಳ್ಳಾವರ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಾಜು ಖಾರ್ವಿ ಸಲಹೆ
ಬೇಲೂರು: ಪ್ರತಿದಿನ ದೂರದ ಪ್ರದೇಶಗಳಿಂದ ಪಟ್ಟಣದ ಶಾಲಾ-ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜಾರಿಗೆ ತಂದಿರುವ ಉಚಿತ ಮತ್ತು ರಿಯಾಯಿತಿ ಬಸ್‌ಪಾಸ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೇಲೂರು ಘಟಕ ವ್ಯವಸ್ಥಾಪಕ ನಾಗರಾಜು ಖಾರ್ವಿ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿಟಿಸಿ ಘಟಕದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಜಾರಿಗೆ ತಂದಿರುವ ಉಚಿತ ಮತ್ತು ರಿಯಾಯಿತಿ ಬಸ್‌ಪಾಸ್ ಅನ್ನು ಬುಧವಾರ ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
2026-27ನೇ ಶೈಕ್ಷಣಿಕ ಸಾಲಿನಲ್ಲಿ ಆರಂಭವಾಗಿದ್ದು, ದೂರದ ಊರುಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಪ್ರಯಾಣದ ವೆಚ್ಚ ತಗ್ಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳಿಗಾಗಿ ಉಚಿತ ಹಾಗೂ ರಿಯಾಯಿತಿ ಬಸ್ ಪಾಸ್‌ಗಳನ್ನು ವಿತರಿಸಲು ಅರ್ಜಿ ಪ್ರಕ್ರಿಯೆ ಈಗಾಗಲೇ ಅಧಿಕೃತವಾಗಿ ಆರಂಭವಾಗಿದೆ. ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಹಿರಿಯ ಸಂಚಾರಿ ನಿಯಂತ್ರಕ ಪುರುಷೋತ್ತಮ್, ನಿಯಂತ್ರಣಾಧಿಕಾರಿಗಳಾದ ಮಮತಾ, ನಾಗರತ್ನಾ, ಕರ್ನಾಟಕ ಒನ್ ಸೆಂಟರ್‌ನ ಮುಖ್ಯಸ್ಥ ದಿನೇಶ್ ಬೆಳ್ಳಾವರ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net