ವಿದ್ಯಾರ್ಥಿಗಳು ರಕ್ತದಾನದ ಮನೋಭಾವ ಬೆಳೆಸಿಕೊಳ್ಳಲಿ

ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ, ಬೆಸ್ಟ್ ಪ್ರಥಮ ದರ್ಜೆ ಕಾಲೇಜು ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಕಾಲೇಜು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಹೆಮ್ಮಿಗೆ ಮೋಹನ್,  ಬಿ.ಆರ್.ಉದಯ್ ಕುಮಾರ್  ಕೆ.ಸಿ. ನವೀನ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರೆಡ್‌ಕ್ರಾಸ್ ಪ್ರಾಂತಪಾಲ ಹೆಮ್ಮಿಗೆ ಮೋಹನ್ ಅಭಿಪ್ರಾಯ
ಹಾಸನ: ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ, ಬೆಸ್ಟ್ ಪ್ರಥಮ ದರ್ಜೆ ಕಾಲೇಜು ಹಾಗೂ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಇತ್ತೀಚೆಗೆ ಕಾಲೇಜು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಶಿಬಿರ ಉದ್ಘಾಟಿಸಿ ಮಾತನಾಡಿದ ರೆಡ್‌ಕ್ರಾಸ್ ಪ್ರಾಂತಪಾಲ ಹೆಮ್ಮಿಗೆ ಮೋಹನ್, ರಕ್ತದಲ್ಲಿ ಎ, ಬಿ, ಎಬಿ,ಒ ನಾಲ್ಕು ಗುಂಪುಗಳಿದ್ದು, ಎಬಿ ನೆಗೆಟಿವ್ ಶೇ.1 ರಷ್ಟು ಮಾತ್ರ ಇದೆ. 1901 ರಲ್ಲಿ ಕಾರ್ಲ್ ಲ್ಯಾಂಡ್‌ಸ್ಟೈನರ್ ರಕ್ತದ ಗುಂಪು ಕಂಡುಹಿಡಿದಿದ್ದಕ್ಕೆ ನೊಬೆಲ್ ಪ್ರಶಸ್ತಿ ಬಂದಿದೆ. ಭಾರತದಲ್ಲಿ ರಕ್ತದ ಕೊರತೆ ಇರುವುದರಿಂದ ವಿದ್ಯಾರ್ಥಿಗಳು ರಕ್ತದಾನ ಮಾಡಿ ಜೀವ ಉಳಿಸಬೇಕು ಎಂದರು.
ನಿರ್ದೇಶಕ ಬಿ.ಆರ್.ಉದಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. 52 ಬಾರಿ ರಕ್ತದಾನ ಮಾಡಿದ ನಿರ್ದೇಶಕ ಗಿರೀಶ್ ಅವರನ್ನು ಶ್ಲಾಘಿಸಿದರು.
ಶಿಬಿರದಲ್ಲಿ 25 ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಅಗರ್ವಾಲ್ ಕಣ್ಣಿನ ಆಸ್ಪತ್ರೆ ಮತ್ತು ವಿ ಕೇರ್ ದಂತ ಆಸ್ಪತ್ರೆ ವತಿಯಿಂದ ತಪಾಸಣೆ ನಡೆಯಿತು. ಪ್ರಾಂಶುಪಾಲ ಕೆ.ಸಿ. ನವೀನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net