187 ನೇ ಛಾಯಾಗ್ರಹಣದ ದಿನಾಚರಣೆ

ಎಚ್.ಡಿ‌‌.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ಛಾಯಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಅನಿಲ್ ಉದ್ಘಾಟಿಸಿದರು.
ಎಚ್.ಡಿ‌‌.ಕೋಟೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿಶ್ವ ಛಾಯಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಅನಿಲ್ ಚಿಕ್ಕಮಾದು ಅವರ ಪತ್ನಿ ಸೌಮ್ಯ ಅನಿಲ್ ಉದ್ಘಾಟಿಸಿದರು.
Published on

ಎಚ್.ಡಿ.ಕೋಟೆ: ಸಮಾಜವನ್ನು ಬದಲಾವಣೆ ಮತ್ತು ಅಭಿವೃದ್ಧಿ ವಿಚಾರದಲ್ಲಿ ಛಾಯಾಗ್ರಾಹಕರು ಮತ್ತು ಪತ್ರಕರ್ತರ ಪಾತ್ರ ಅತಿ ಮುಖ್ಯವಾಗಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ಪತ್ನಿ ಸೌಮ್ಯ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ 187 ನೇ ಛಾಯಾಗ್ರಹಣದ ದಿನಾಚರಣೆಯನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರು ಮತ್ತು ಛಾಯಾಗ್ರಾಹಕರ ಸೇವೆ ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿದೆ. ಸಮಾಜದ ಪ್ರತಿಯೊಬ್ಬ ಜನಸಾಮಾನ್ಯರ ವೃತ್ತಿಯ ಜೀವನದ ಕೆಲಸಗಳನ್ನು ಗಮನಿಸಿತ್ತಾ ವರದಿ ಮತ್ತು ಛಾಯಾಚಿತ್ರ ತೆಗೆಯುತ್ತಾ ಸಮಾಜ ಬದಲಾವಣೆಗೆ ತಮ್ಮದೆ ಕೊಡುಗೆ ನೀಡುತ್ತಾ ಬಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ, ಅಪಪ್ರಚಾರ ಮಾಡುವಲ್ಲಿ ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಮುಂದಾಗಿದ್ದಾರೆ ಇದು ಅವರಿಗೆ ಶ್ರೇಯಸ್ ತರುವುದಿಲ್ಲ. ಇರುವ ಸತ್ಯ ಸತ್ಯಾಂಶಗಳನ್ನು ಜನರಿಗೆ ತಿಳಿಸಿ ಸಮಾಜ ಬದಲಾವಣೆ ಮಾಡಿ ತಾಲೂಕು ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಶಾಸಕ ಅನಿಲ್ ಚಿಕ್ಕಮಾದು ಮತ್ತು ಅವರ ಕುಟುಂಬ ತಾಲೂಕಿನಲ್ಲಿ ಜನಸಾಮಾನ್ಯರಿಗೆ ಸ್ಪಂದಿಸಿ, ಸರಳ ಸಜ್ಜನಿಕೆಯಾಗಿ ಉತ್ತಮ ಸೇವೆ ಮಾಡಿರುವುದರಿಂದ ಜನತೆ 15 ವರ್ಷಗಳ ಕಾಲದಿಂದ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಉಳಿಸಿಕೊಂಡು ಹೋಗುವ ಕೆಲಸ ನಮ್ಮ ಕುಟುಂಬ ಮಾಡುತ್ತಿದೆ ಎಂದರು‌.

ಇತ್ತೀಚಿನ ತಂತ್ರಜ್ಞಾನದಲ್ಲಿ ಛಾಯಾಗ್ರಹಕರ ಪರಿಸ್ಥಿತಿ ಚಿಂತಾ ಜನಕವಾಗಿದ್ದರು ಛಾಯಾಚಿತ್ರ ತೆಗೆಯುವ ಛಾಯಾಗ್ರಹಾಕರ ಕೈಚಳಕವೇ ಮುಖ್ಯವಾಗಿದೆ ಇದು ಪ್ರತಿಯೊಂದು ಮನುಷ್ಯ ಜೀವನ ಪರಂಪರಿತವಾಗಿ ನೋಡಿಕೊಳ್ಳಬಹುದಾದ ಚಿತ್ರ ತೆಗೆಯುವುದು ಇವರಿಗೆ ಮಾತ್ರ ಸಾಧ್ಯ ತಾಲೂಕಿನಲ್ಲಿ ಮಹಿಳೆಯರು ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿ ಸಂಘ ಪ್ರಾರಂಭಿಸಿರುವುದು ತಾಲೂಕಿಗೆ ಹೆಮ್ಮೆ ತರುವಂತದ್ದಾಗಿದೆ ಸಂಘದ ಮತ್ತು ಛಾಯಾಗ್ರಕರ ಅಭಿವೃದ್ಧಿ ಮತ್ತು ಕಷ್ಟ ಸುಖಗಳಿಗೆ ಶಾಸಕರು ಸದಾ ಸ್ಪಂದಿಸಲಿದ್ದಾರೆ ಛಾಯಾಗ್ರಹಕರು ತಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಮುಂದೆ ತರುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಅತ್ಯುತ್ತಮ ಛಾಯಾಚಿತ್ರಕ್ಕೆ ಹಾಗೂ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ ರಾಜು, ವನ್ಯಜೀವಿ ಛಾಯಾಗ್ರಾಹಕ ಸಿದ್ದಲಿಂಗ ಪ್ರಸಾದ್, ಸಮೀರ್ ಕೋಟೆ, ತಾರಕ ಪಂಕ್ಷನ್ ಹಾಲ್ ಮಾಲೀಕ ಕುಮಾರ್ ಗೌಡ, ಬಾಲಸುಬ್ರಹ್ಮಣ್ಯಂ, ಸತೀಶ್ ನಂಜನಗೂಡು, ಮಹದೇವಪ್ಪ ಮಡಿಕೇರಿ ಜೀವನ್ ಹೈಟೆಕ್ ರವಿ, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಗುರುಸ್ವಾಮಿ ಗೌರವಾಧ್ಯಕ್ಷ ರವಿಕುಮಾರ್ ಆರಾಧ್ಯ, ಉಪಾಧ್ಯಕ್ಷ ವೆಂಕಟೇಶ್ ಕುಮಾರ್, ಕಾರ್ಯಾಧ್ಯಕ್ಷ ಪಾರಿ, ಖಜಾಂಚಿ ರಮೇಶ್, ಸಲಹೆಗಾರರಾದ ಲಕ್ಷ್ಮಿ ಸ್ವಾಮಿ, ಸಂಚಾಲಕರಾದ ನಾಗು ಸಾಗರ್, ಸಹ ಕಾರ್ಯದರ್ಶಿ ರವಿ ಕೆರೂರು, ನಿರ್ದೇಶಕರಾದ ನಿಂಗರಾಜು, ಸೋಮೇಶ್, ಕುಮಾರ್, ಅನುಶ್ರೀ, ಮಹೇಂದ್ರ ಗುರು ಆಚಾರ್, ಕುಮಾರ್ ಮೂರ್ತಿ, ಮಾಜಿ ಅಧ್ಯಕ್ಷರಾದ ಸತೀಶ್ ಆರಾಧ್ಯ, ಮನೋಜ್, ಪ್ರಮೋದ್, ಹೊನ್ನೇಗೌಡ, ಸ್ವಾಮಿ, ವನಸಿರಿ ಶಂಕರ, ಸುರೇಶ, ರವಿ ಆಚಾರ್, ಪರಮೇಶ್, ಗಂಗಾಧರ್, ಮುರುಳಿ, ವಾಸಕಿ ನಾಗೇಶ್, ಸಚಿನ್, ಶಂಬು, ನಾಗೇಂದ್ರ ರಘುರಾಮ್, ಸುರೇಶ, ನಿಂಗರಾಜು, ನಂದೀಶ, ಗುರು, ಸಂತೋಷ್, ಪರಮೇಶ್ ಗೌಡ, ರಶ್ಮಿ, ಶಾನಿ, ರೇಖಾ, ವೆಂಕಿ, ನಿಂಗಪ್ಪ, ಸೋಮೇಶ್, ಮಹೇಂದ್ರ, ಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪೋಟೋ ಇದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net