ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮೇ 27ರ ಬುಧವಾರದಿಂದ ಜೂ. 4ರ ರವರೆಗೂ ಮೌನ ಶಿವಾನುಷ್ಠಾನವನ್ನು ಮಾಡಲಾಗುವುದು. ಜೂ. 5ರಂದು ಮೌನಾನುಷ್ಠಾನ ಮಹಾಮಂಗಳ ಪ್ರಯುಕ್ತ ಬೆಳಿಗ್ಗೆ 6 ಗಂಟೆಯಿಂದ ಸಂಕಲ್ಪ ಪೂರ್ವಕ ಗಂಗಾ ಗೋಪೂಜೆ, ಶ್ರೀದುರ್ಗಾ ನವಾಕ್ಷರಿ ಮಂತ್ರ ಹೋಮ-ಪೂರ್ಣಾಹುತಿ ಜರುಗಲಿದೆ. ಸ್ವಾಮೀಜಿಗಳ ಮೌನಾನುಷ್ಠಾನ ಸಮಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.