ಮನತಣಿಸಿದ ಸಿಕ್ಕಲ್ ಗುರುಚರಣ್ ಹಾಡುಗಾರಿಕೆ

ಅರಕಲಗೂಡು ತಾಲೂಕು ರಾಮನಾಥಪುರ ಪಟ್ಟಾಭಿರಾಮನ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ 8ನೇ ದಿನದ  ಶ್ರೀರಾಮನವಮಿ ಸಂಗೀತೋತೋತ್ಸವದಲ್ಲಿ ವಿದ್ವಾನ್ ಸಿಕ್ಕಿಲ್ ಗುರುಚರಣ್    ಹಾಡುಗಾರಿಕೆ ನಡೆಸಿಕೊಟ್ಟರು.
ಅರಕಲಗೂಡು ತಾಲೂಕು ರಾಮನಾಥಪುರ ಪಟ್ಟಾಭಿರಾಮನ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ 8ನೇ ದಿನದ ಶ್ರೀರಾಮನವಮಿ ಸಂಗೀತೋತೋತ್ಸವದಲ್ಲಿ ವಿದ್ವಾನ್ ಸಿಕ್ಕಿಲ್ ಗುರುಚರಣ್ ಹಾಡುಗಾರಿಕೆ ನಡೆಸಿಕೊಟ್ಟರು.
Published on
ಅರಕಲಗೂಡು: ಮನುಷ್ಯ ಸಂಕಷ್ಟಗಳ ಸಾಗರವನ್ನು ದಾಟಿ ಸುಖ, ಸಂತೃಪ್ತಿ, ನೆಮ್ಮದಿ, ಶಾಂತಿ ದಡ ಸೇರಲು ಭಗವಂತನು ಕರುಣಿಸಿರುವ ಪರಮೊತ್ತಮ್ಮ ಸಾಧನ ಸಂಗೀತವಾಗಿದೆ ಎಂದು ಬ್ರಾಹ್ಮಣ ಸಮುದಾಯದ ಮುಖಂಡ ಆರ್.ಆರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮ ದೇವಾಲಯದ ಸಭಾಂಗಣದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ 8ನೇ ದಿನದ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಮಾತನಾಡಿದ ಅವರು, ಇಂದಿನ ಪೀಳಿಗೆಯ ಎಲ್ಲ ಜನರು ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸಕಲ ಭಕ್ತರು ಸಂಗೀತ ಆಲಿಸಿ, ಪಾಲಿಸಿಕೊಂಡು ನಡೆಯಬೇಕು ಎಂದು ತಿಳಿಸಿದರು.
ವಿದ್ವಾನ್ ಸಿಕ್ಕಲ್ ಗುರುಚರಣ್ ಹಾಡುಗಾರಿಕೆ, ವಿದ್ವಾನ್ ಮೈಸೂರು ಎಚ್.ಎನ್. ಭಾಸ್ಕರ್ ಮೃದಂಗ, ವಿದ್ವಾನ್ ತುಮಕೂರು ರವಿಶಂಕರ್ ಮೃದಂಗ, ವಿದ್ವಾನ್ ಶಮಿತ್ ಗೌಡ ಘಟಂ ಪ್ರಸ್ತುತಪಡಿಸಿದರು.
ವಿದ್ವಾನ್ ಎಚ್.ಎಸ್. ಕೃಷ್ಣ ಅಯ್ಯಂಗಾರ್ ಮತ್ತು ಸಹೋದರರು, ಎಚ್.ಆರ್.ಮುರಳೀಧರ್ ಮತ್ತು ಮಕ್ಕಳು ದಾಸೋಹ ವ್ಯವಸ್ಥೆ ಮಾಡಿದ್ದರು. ದೇವಾಲಯದ ಮುಖ್ಯ ಅರ್ಚಕ ಶ್ರೀನಿವಾಸಭಟ್ಟರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net