ಶ್ರೀ ಬಸವೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆ

ಗಂಜಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಕೆಂಪೇಗೌಡ, ಕೃಷ್ಣ, ಅಶೋಕ್, ಅನಿಲ್, ಉಪೇಂದ್ರ, ದೊರೆ, ಸೋಮಶೇಖರ್, ಸಿದ್ದಲಿಂಗೇಗೌಡ, ಚರಣ, ಮೂರ್ತಿ ಇದ್ದರು
ಗಂಜಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ರಥೋತ್ಸವಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಕೆಂಪೇಗೌಡ, ಕೃಷ್ಣ, ಅಶೋಕ್, ಅನಿಲ್, ಉಪೇಂದ್ರ, ದೊರೆ, ಸೋಮಶೇಖರ್, ಸಿದ್ದಲಿಂಗೇಗೌಡ, ಚರಣ, ಮೂರ್ತಿ ಇದ್ದರು
Published on
ನುಗ್ಗೇಹಳ್ಳಿ: ಹೋಬಳಿಯ ಗಂಜಿಗೆರೆ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಬಸವೇಶ್ವರ ಸ್ವಾಮಿ ಅವರ ರಥೋತ್ಸವ ಸೋಮವಾರ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.
ಸೋಮವಾರ ಬೆಳಗ್ಗೆ ಮೂಲದೇವರಿಗೆ ಅಭಿಷೇಕ ಹೂವಿನ ಅಲಂಕಾರ, ರಥಕ್ಕೆ ನೂತನ ಕಳಸ ಪ್ರತಿಷ್ಠಾಪನೆ ಹೂವಿನ ಅಲಂಕಾರ, ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಉತ್ಸವ, ಪ್ರಸಾದ ಸೇವೆ ಮಹಾಮಂಗಳಾರತಿ ನಂತರ ತೇರು ಎಳೆಯಲಾಯಿತು. ರಥೋತ್ಸವಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ವಿವಿಧ ಊರುಗಳಿಂದ ಆಗಮಿಸಿದ ಭಕ್ತರು ಶ್ರೀ ಬಸವೇಶ್ವರ ಸ್ವಾಮಿ ದರ್ಶನ ಪಡೆದು ರಥಕ್ಕೆ ಹಣ್ಣು ದವನ ಎಸೆದು ಭಕ್ತಿ ಸಮರ್ಪಿಸಿದರು. ಭಕ್ತರಿಗೆ ಪಾನಕ, ಫಲಹಾರ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರಾದ ಕೆಂಪೇಗೌಡ, ಕೃಷ್ಣ, ಅಶೋಕ್, ಅನಿಲ್, ದೊರೆ, ಉಪೇಂದ್ರ, ಧನಂಜಯ, ಸೋಮಶೇಖರ್, ಚಂದ್ರೇಗೌಡ, ಸಿದ್ದಲಿಂಗೇಗೌಡ, ಚರಣ, ಜಿ.ಸಿ.ಶೇಖರ್, ಜಿ.ಪಿ.ಮೂರ್ತಿ ಇತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net