ಯಳವಾರೆ ಹುಚ್ಚಮ್ಮದೇವಿಗೆ ವಿಶೇಷ ಪೂಜೆ

ಯಳವಾರೆ ಗ್ರಾಮದ ಬುಡಕಟ್ಟಿನ ಶ್ರೀ ಹುಚ್ಚಮ್ಮದೇವಿ ಅಮ್ಮನವರ ದೊಡ್ಡ ಬಾನದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
ಯಳವಾರೆ ಗ್ರಾಮದ ಬುಡಕಟ್ಟಿನ ಶ್ರೀ ಹುಚ್ಚಮ್ಮದೇವಿ ಅಮ್ಮನವರ ದೊಡ್ಡ ಬಾನದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
Published on
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿ ಯಳವಾರೆ ಗ್ರಾಮದ ಬುಡಕಟ್ಟಿನ ಆದಿಶಕ್ತಿ ಸ್ವರೂಪಿಣಿ ಶ್ರೀ ಹುಚ್ಚಮ್ಮದೇವಿ( ಯಳವಾರೆ) ಅಮ್ಮನವರ ದೊಡ್ಡ ಬಾನದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಬುಧವಾರ ಜರುಗಿದವು.
ಗ್ರಾಮಸ್ಥರಿಂದ ಧ್ವಜಾರೋಹಣ ನಡೆಯಿತು. ರಾಜಬೀದಿಯಲ್ಲಿ ಕಳಸ ಹೊತ್ತು ಆದಿಶಕ್ತಿ ಸ್ವರೂಪಿಣಿ ಶ್ರೀ ಹುಚ್ಚಮ್ಮದೇವಿ( ಯಳವಾರೆ)ಅಮ್ಮನವರ ಹಾಗೂ ಕೋಡಮ್ಮದೇವಿಯ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು. ಅಮ್ಮನವರಿಗೆ ಮಡಿಲಕ್ಕಿ ಸೇವೆ, ಬಾಯಿಬೀಗದೊಂದಿಗೆ ಚಲುವರಾಯಸ್ವಾಮಿ ಹಾಗು ದೂತರಾಯಸ್ವಾಮಿಯ ಚೋಮನಕುಣಿತ ಜನಮನ ಸೆಳೆಯಿತು. ನಂತರ ಮಹಾ ಮಂಗಳಾರತಿ ಜರುಗಿತು. ಸಾವಿರಾರು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net