ಹಿರೀಸಾವೆ: ಪಟ್ಟಣದಲ್ಲಿ ಕೌಟುಂಬಿಕ ಕಲಹದಿಂದಾಗಿ ಮಗನೇ ತಂದೆಯನ್ನು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಶನಿವಾರ ಹತ್ಯೆ ಮಾಡಿದ್ದಾನೆ.
ಗ್ರಾಮದ ಕೆರೆಬೀದಿ ನಿವಾಸಿ ಸತೀಶ್(60) ಮೃತ. ಪುತ್ರ ರಂಜಿತ್(28) ಕೊಲೆ ಆರೋಪಿ. ಸತೀಶ್ ಹಾಗೂ ಪತ್ನಿ ನಿರ್ಮಲಾ ನಡುವೆ ವೈಮನಸ್ಸಿನಿಂದ ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿತ್ತು. ಸತೀಶ್ ಅವರು ತಾಯಿ ಪುಟ್ಟಮ್ಮ ಜತೆಗೆ ಹಿರೀಸಾವೆ ಮನೆಯಲ್ಲಿ ವಾಸವಿದ್ದರು. ಶನಿವಾರ ಸಂಜೆ ಮನೆಗೆ ಬಂದ ರಂಜಿತ್ ತಂದೆಯೊಂದಿಗೆ ಜಗಳ ಮಾಡಿದ್ದು, ಆಕ್ರೋಶದಲ್ಲಿ ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.