ಆರು ಅಡಿ ಉದ್ದದ ಕೇರೆ ಹಾವು ರಕ್ಷಣೆ

ಹೊಳೆನರಸೀಪುರ ಪಟ್ಟಣದ ಎಲ್‌ಐಸಿ ಕಚೇರಿ ಹೊರ ಆವರಣದಲ್ಲಿದ್ದ ಕೇರೆ ಹಾವು ರಕ್ಷಣೆ ಮಾಡಿದ ಉರಗ ರಕ್ಷಕ ಶೇಷಪ್ಪ.
ಹೊಳೆನರಸೀಪುರ ಪಟ್ಟಣದ ಎಲ್‌ಐಸಿ ಕಚೇರಿ ಹೊರ ಆವರಣದಲ್ಲಿದ್ದ ಕೇರೆ ಹಾವು ರಕ್ಷಣೆ ಮಾಡಿದ ಉರಗ ರಕ್ಷಕ ಶೇಷಪ್ಪ.
Published on
ಹೊಳೆನರಸೀಪುರ: ಸುಮಾರು 6 ಅಡಿ ಉದ್ದದ ಗಂಡು ಕೇರೆಹಾವನ್ನು ಉರಗ ರಕ್ಷಕ ಶೇಷಪ್ಪ ಎಂಬುವರು ರಕ್ಷಣೆ ಮಾಡಿ ಮಾನವೀಯತೆ ಮೆರೆದರು.
ಪಟ್ಟಣದ ಎಲ್‌ಐಸಿ ಕಚೇರಿಯ ಹೊರ ಆವರಣದಲ್ಲಿ ಸೋಮವಾರ ಹಾವು ಪ್ರತ್ಯಕ್ಷವಾಗಿ ವಸತಿಗೃಹಗಳಲ್ಲಿ ನೆಲೆಸಿರುವ ಸಿಬ್ಬಂದಿ ಭಯಗೊಂಡಿದ್ದರು. ವಸತಿ ನಿಲಯಗಳ ಸುತ್ತಮುತ್ತ ಓಡಾಡುತ್ತಿದ್ದ ಹಾವನ್ನು ಕಂಡ ಅಧಿಕಾರಿ ಗೌತಮ್ ಎಂಬುವರು ಹಾವು ರಕ್ಷಣೆ ಮಾಡುವ ಶೇಷಪ್ಪ ಅವರನ್ನು ಕರೆಸಿ ಬಿಲದೊಳಗೆ ಅಡಗಿಕೊಂಡಿದ್ದ ಕೇರೆ ಹಾವನ್ನು  ಯಾವುದೇ ಅನಾಹುತ ಆಗದ ರೀತಿ ರಕ್ಷಣೆ ಮಾಡಿದರು. ಹಿಡಿದ ಸುಮಾರು 6 ಅಡಿ ಉದ್ದದ ಹಾವನ್ನು  ಪ್ಲಾಸ್ಟಿಕ್ ಬಾಕ್ಸ್ ಒಳಗೆ ಹಾಕಿಕೊಂಡು ಅರಣ್ಯ ಪ್ರದೇಶಕ್ಕೆ ಬಿಡಲು ಕೊಂಡೊಯ್ದರು. ಭಯಗೊಂಡಿದ್ದ ಕಚೇರಿ ಸಿಬ್ಬಂದಿಗಳು ನಿಟ್ಟುಸಿರುಬಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net