ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ (ಎಸ್‌ಐಆರ್) ಪರಿಷ್ಕರಣೆ ಕಾರ್ಯ ವೇಗವಾಗಿ ಸಾಗುತ್ತಿದ್ದು, ಈಗಾಗಲೇ ಎನ್ಯೂಮರೇಷನ್ ಫಾರ್ಮ್‌ಗಳ ಶೇ.100ರಷ್ಟು ವಿತರಣೆಗೊಂಡಿದ್ದು, 2,04,786 ಮತದಾರರ ಪೈಕಿ 1,81,382 ಎನ್ಯೂಮರೇಷನ್ ಫಾರ್ಮ್‌ಗಳ ಡಿಜಿಟಲೀಕರಣ ಪೂರ್ಣಗೊಂಡಿದ್ದು, ಶೇ.88.57 ರಷ್ಟು ಪ್ರಗತಿಯಾಗಿದೆ ಎಂದು ಚುನಾವಣಾ ನೋಂದಣಿ ಅಧಿಕಾರಿ(ಇಆರ್‌ಒ) ರಜನಿಕಾಂತ್ ಹೇಳಿದರು.