ಅಗಿಲೆ-ದೊಡ್ಡಬಾಗನಹಳ್ಳಿಯ 60 ಅಡಿ ಮುಖ್ಯ ರಸ್ತೆ, ಕೆರೆ ಜಾಗವನ್ನೂ ಒತ್ತುವರಿ ಮಾಡಿದ್ದು, ಜಿಪಂ ಅನುದಾನ ಹಾಗೂ ಗ್ರಾಪಂ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಬಾರಿ ಜಲ್ಲಿ ರಸ್ತೆ ನಿರ್ಮಿಸಲಾಗಿದೆ. ಆದರೀಗ ಜೆಸಿಬಿ ಮೂಲಕ ರಸ್ತೆ ಮುಚ್ಚಿಸಿ ಒತ್ತುವರಿ ಮಾಡಿದ್ದಾರೆ. ಕೆರೆಯನ್ನೂ ಕಬಳಿಸಿದ್ದು, ರೈತರು ಮತ್ತು ಸಾರ್ವಜನಿಕರ ಓಡಾಟಕ್ಕೆ ಇದ್ದ ಏಕೈಕ ಮುಖ್ಯ ರಸ್ತೆಗೆ ಅಡ್ಡಿಯಾಗಿದೆ. ಈ ಜಾಗವನ್ನು ಬಿಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.