ಪ್ರಯಾಣಿಕರ ತಂಗುದಾಣ ನಿರ್ಮಾಣ ಸ್ಥಳ ಪರಿಶೀಲನೆ

ಬೇಲೂರು ಪಟ್ಟಣದ ಜೆಪಿ ನಗರದ ವಸತಿ ನಿಲಯ ಮುಂಭಾಗದಲ್ಲಿ ಪ್ರಯಾಣಿಕರ ತಂಗುದಾಣ  ನಿರ್ಮಿಸಲು ಉದ್ದೇಶಿಸಿರುವ  ಸ್ಥಳವನ್ನು ಶಾಸಕ ಎಚ್.ಕೆ.ಸುರೇಶ್  ಪರಿಶೀಲಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ತಿಯಾರ್ ಅಹಮದ್, ಕಾರ್ಯದರ್ಶಿ ಎಂ.ಪಿ.ಪೂವಯ್ಯ, ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಇತರರು ಇದ್ದರು.
ಬೇಲೂರು ಪಟ್ಟಣದ ಜೆಪಿ ನಗರದ ವಸತಿ ನಿಲಯ ಮುಂಭಾಗದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಉದ್ದೇಶಿಸಿರುವ ಸ್ಥಳವನ್ನು ಶಾಸಕ ಎಚ್.ಕೆ.ಸುರೇಶ್ ಪರಿಶೀಲಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ತಿಯಾರ್ ಅಹಮದ್, ಕಾರ್ಯದರ್ಶಿ ಎಂ.ಪಿ.ಪೂವಯ್ಯ, ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್ ಇತರರು ಇದ್ದರು.
Published on

ಬೇಲೂರು :

ವಿದ್ಯಾರ್ಥಿಗಳು, ರೈತರು ಹಾಗೂ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಲಯನ್ಸ್ ಕ್ಲಬ್ ಮುಂದಾಗಿದ್ದು, ಶಾಸಕ ಎಚ್.ಕೆ.ಸುರೇಶ್ ಸೋಮವಾರ ಜೆಪಿ ನಗರದಲ್ಲಿ ಸ್ಥಳ ಪರಿಶೀಲಿಸಿದರು.

ಲಯನ್ಸ್ ಕ್ಲಬ್ ಪದಾಧಿಕಾರಿಗಳೊಂದಿಗೆ ಪಟ್ಟಣದ ಜೆಪಿ ನಗರದ ವಸತಿ ನಿಲಯ ಮುಂಭಾಗದಲ್ಲಿ ಸೋಮವಾರ ಸ್ಥಳ ಪರಿಶೀಲಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಲಯನ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಇದೀಗ ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಸರ್ಕಾರದ ಅನುದಾನ ಅವಲಂಬಿಸದೆ, ತಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದ ಒಳಿತಿಗೆ ವಿನಿಯೋಗಿಸಿ ಕೆಲಸ ಕೈಗೊಳ್ಳುತ್ತಿರುವುದು ಮಾದರಿಯಾಗಿದೆ. ಇವರಿಗೆ ಪುರಸಭೆ ಅಧಿಕಾರಿಗಳು ಸಹಕಾರ ನಿಡಬೇಕು ಎಂದರು.
ಸಮಾಜಮುಖಿ ಚಿಂತನೆ:
ಲಯನ್ಸ್ ಕ್ಲಬ್ ಅಧ್ಯಕ್ಷ ಮುಕ್ತಿಯಾರ್ ಅಹಮದ್ ಮಾತನಾಡಿ, ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಕ್ಲಬ್ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಸ್ಥಳೀಯರ ಬೇಡಿಕೆ ಗಮನಿಸಿ ಸುಸಜ್ಜಿತ ತಂಗುದಾಣ ನಿರ್ಮಿಸಲು ನಿರ್ಧರಿಸಿದ್ದೇವೆ. ಇದಕ್ಕೆ ತಗುಲುವ ವೆಚ್ಚವನ್ನು ನಾವೇ ಭರಿಸಲಿದ್ದೇವೆ ಎಂದರು.

ಲಯನ್ಸ್ ಭವನ ಟ್ರಸ್ಟ್ ಅಧ್ಯಕ್ಷ ದೊಡ್ಡಮನೆ ಪ್ರಭಾಕರ್, ಖಜಾಂಚಿ ಸಂತೋಷ, ಪ್ರಶಾಂತ್, ಆದರ್ಶ, ಅಬ್ದುಲ್ ಲತೀಫ್, ಹೆಬ್ಬಾಳು ಹಾಲಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net