ತಾಲೂಕಿನ ಹೊಡಚಹಳ್ಳಿ ಗ್ರಾಮದ ಹೊರವಲಯದ ರಕ್ಷಿತಾರಣ್ಯದಲ್ಲಿ ಮೋಜಿನಲ್ಲಿ ತೊಡಗಿದ್ದ ಏಳು ಜೀಪುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಶನಿವಾರ ಹೊಡಚಹಳ್ಳಿ ಗ್ರಾಮದ ಹೊರವಲಯದ ಅರಣ್ಯಕ್ಕೆ ಆಗಮಿಸಿದ ಬೆಂಗಳೂರು ಮೂಲದ ಯುವಕರ ತಂಡ ಜೀಪುಗಳಲ್ಲಿ ಮನಬಂದಂತೆ ಮಡ್ ಟ್ರೇಕ್‌ನಲ್ಲಿ ತೊಡಗಿದೆ. ಇದರಿಂದ ಅರಣ್ಯಪ್ರದೇಶ ಕೆಸರುಮಯವಾಗಿತ್ತು.
ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಾಚರಣೆಗಿಳಿದ ಉಪವಲಯ ಅರಣ್ಯಾಧಿಕಾರಿಗಳಾದ ಮಂಜುನಾಥ, ಅರ್ಜುನ್, ಮಹದೇವ್ ನೇತೃತ್ವದ ತಂಡ ಜೀಪುಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ದೂರು ದಾಖಲಿಸಿದೆೆ.