ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ

  ​ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿರುವ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ  ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ತಹಸಿಲ್ದಾರ್ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು.
​ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿರುವ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮವನ್ನು ತಹಸಿಲ್ದಾರ್ ಮಲ್ಲಿಕಾರ್ಜುನ್ ಉದ್ಘಾಟಿಸಿ ಮಾತನಾಡಿದರು.
Published on
ಆಲೂರು: ದೇಶದಲ್ಲಿ ಶರಣರು, ಸಂತರು ಬಂದು ಹೋಗಿದ್ದಾರೆ. ಬಂಜಾರ ಸಮುದಾಯದ ಆರಾಧ್ಯ ದೈವ ವಾಗಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಹೆಚ್. ಮಲ್ಲಿಕಾರ್ಜುನ್ ತಿಳಿಸಿದರು
​ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿರುವ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾರಾಜರು ತಂದೆ ಭೀಮಾ ನಾಯಕ್ ಮತ್ತು ತಾಯಿ ಧರ್ಮಿಣಿ ಬಾಯಿ ದಂಪತಿಗಳ ಮಗನಾಗಿ ವಿಜಯಪುರ ಜಿಲ್ಲೆಯ ಜಿಲ್ಲೆಯ ಸುರಗೊಂಡನಕೊಪ್ಪ (ಇಂದಿನ ಶಿವಮೊಗ್ಗ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿದೆ)1939 ಫೆಬ್ರವರಿ 15, ರಂದು ಜನಿಸಿದರು.ಸಂತ ಸೇವಾಲಾಲ್ ರು ಸಾಮಾಜಿಕ ಸುಧಾರಣೆಗೆ ಹೆಚ್ಚು ಒತ್ತನ್ನು ಕೊಟ್ಟವರು ಇವರು ಕೇವಲ ಒಬ್ಬ ಧಾರ್ಮಿಕ ಗುರುವಾಗಿರದೆ, ಸಮಾಜದ ಕೆಡುಕುಗಳನ್ನು ಹೋಗಲಾಡಿಸಲು ಶ್ರಮಿಸಿದ ಕ್ರಾಂತಿಕಾರಿ ಪುರುಷರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರರಾಗಿ ಸೋಮನಾಯಕ್ ಮಾತನಾಡಿ, ಅಲೆಮಾರಿಗಳಾಗಿದ್ದ ಬಂಜಾರ ಜನರನ್ನು ಸಂಘಟಿಸಿ, ಅವರಿಗೆ ಶಿಕ್ಷಣದ ಮಹತ್ವ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. "ಸತ್ಯವೇ ದೇವರೆಂದು ನಂಬಿ, ಕಳವು ಮಾಡಬೇಡಿ, ಎಲ್ಲರನ್ನೂ ಪ್ರೀತಿಸಿ" ಎಂಬುದು ಅವರ ಜೀವನದ ಸಂದೇಶವಾಗಿತ್ತು ಅಹಿಂಸೆಗೆ ಒತ್ತನ್ನು ನೀಡಿದ ಅವರು ಪ್ರಾಣಿ ಬಲಿಯನ್ನು ವಿರೋಧಿಸಿದರು ಮತ್ತು ಜೀವಕಾರುಣ್ಯವನ್ನು ಬೋಧಿಸಿದರು.ವ್ಯಸನ ಮುಕ್ತ ಸಮಾಜ,ಮದ್ಯಪಾನ ಮತ್ತು ಮಾಂಸಾಹಾರದಿಂದ ದೂರವಿರಲು ಕರೆ ನೀಡಿದರು,ಪರಿಸರ ಪ್ರೇಮ ಪ್ರಕೃತಿಯನ್ನು ಪೂಜಿಸಬೇಕು ಮತ್ತು ಗಿಡಮರಗಳನ್ನು ಬೆಳೆಸಬೇಕು ಎಂದ ಅವರು. ಮೀಸಲಾತಿಯಲ್ಲಿ ಲಂಬಾಣಿ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ರಾಜಕೀಯವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಇಮ್ಮಟಿಸುವ ಪ್ರಯತ್ನ ಸರ್ಕಾರ ನಡೆಸುತ್ತಿದೆ. ಇದರ ವಿರುದ್ಧ ನಾವು ಸಮರಸಾರಬೇಕಾದ ಕಾಲ ಬಂದೊದಗಿದೆ. ಕೈಯಲ್ಲಿ ಧ್ವಜ ಹಿಡಿದು ಮಿಸಲಾತಿ ಅನ್ಯಾಯ ಪ್ರಶ್ನಿಸಿ ನಿಮ್ಮ ಜೊತೆ ಹೋರಾಟದ ಧ್ವನಿಯಾಗಲು ನಾನು ಸಿದ್ಧನಿದ್ದೇನೆ. ಮನಸ್ತಾಪಗಳನ್ನು ಬದಿಗೆಟ್ಟು ಹೋರಾಟದ ಕಿಚ್ಚು ಹಚ್ಚಲು ಸಿದ್ದರಾಗೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಅಂಕೇಗೌಡ, ಅಕ್ಷರ ದಾಸೋಹ ಸ. ನಿರ್ದೇಶಕ ಸಿದ್ದೇಶ್,ಎ.ಡಿ.ಎಲ್.ಆರ್ ರವಿಶಂಕರ್,ಅಖಿಲ ಭಾರತ ಬಂಜಾರ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೋಮ ನಾಯ್ಕ್,ತಾ.ಅಧ್ಯಕ್ಷ ರವಿನಾಯ್ಕ್,ತಾ.ಪಂ ಸ. ನಿರ್ದೇಶಕ ಕೇಶವಮೂರ್ತಿ, ಭೂ ಮಾಪಕ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net