ರಾಷ್ಟ್ರಭಕ್ತಿ, ಸಾಮಾಜಿಕ ಜವಾಬ್ದಾರಿ ಮೂಡಿಸಲಿದೆ ಸೇವಾ ದಳ

ಭಾರತ ಸೇವಾ ದಳದ ಸಂಸ್ಥಾಪಕ ಡಾ.ನಾ.ಸು.ಹರ್ಡಿಕರ್ ಜನ್ಮ ದಿನಾಚರಣೆ ಅಂಗವಾಗಿ ಬೇಲೂರಿನಲ್ಲಿ ಅವರ ಪುತ್ಥಳಿಗೆ ಪುಷ್ಪಹಾರದ ಮೂಲಕ ಗಣ್ಯರು ಗೌರವ ಸಲ್ಲಿಸಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್, ಭಾರತ ಸೇವಾ ದಳದ ಜಿಲ್ಲಾ ಸಂಚಾಲಕಿ ರಾಣಿ,  ತಾಲೂಕು ಅಧ್ಯಕ್ಷ ಯುವರಾಜು, ಸಂಚಾಲಕ ಬಾಳೆಹಣ್ಣು ರಮೇಶ್, ಮುಖಂಡ ವೆಂಕಟೇಶ್ ಇತರರು ಇದ್ದರು.
ಭಾರತ ಸೇವಾ ದಳದ ಸಂಸ್ಥಾಪಕ ಡಾ.ನಾ.ಸು.ಹರ್ಡಿಕರ್ ಜನ್ಮ ದಿನಾಚರಣೆ ಅಂಗವಾಗಿ ಬೇಲೂರಿನಲ್ಲಿ ಅವರ ಪುತ್ಥಳಿಗೆ ಪುಷ್ಪಹಾರದ ಮೂಲಕ ಗಣ್ಯರು ಗೌರವ ಸಲ್ಲಿಸಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್, ಭಾರತ ಸೇವಾ ದಳದ ಜಿಲ್ಲಾ ಸಂಚಾಲಕಿ ರಾಣಿ, ತಾಲೂಕು ಅಧ್ಯಕ್ಷ ಯುವರಾಜು, ಸಂಚಾಲಕ ಬಾಳೆಹಣ್ಣು ರಮೇಶ್, ಮುಖಂಡ ವೆಂಕಟೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್ ಅಭಿಪ್ರಾಯ
  • ಡಾ.ನಾ.ಸು.ಹರ್ಡಿಕರ್ ಜನ್ಮದಿನಾಚರಣೆ ಪ್ರಯುಕ್ತ ಪುತ್ಥಳಿಗೆ ಪುಷ್ಪಾರ್ಚನೆ
ಬೇಲೂರು: ದೇಶ ಭಕ್ತಿ, ಸೇವಾ ಮನೋಭಾವ ಮತ್ತು ಶಿಸ್ತು ಬದ್ಧ ಸಮಾಜ ನಿರ್ಮಾಣಕ್ಕೆ ಡಾ.ನಾ.ಸು.ಹರ್ಡಿಕರ್ ಅವರ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಪ್ರಭಾರ ಅಧ್ಯಕ್ಷೆ ಉಷಾ ಸತೀಶ್ ಹೇಳಿದರು.
ಭಾರತ ಸೇವಾ ದಳದ ಸಂಸ್ಥಾಪಕರೂ ಆದ ಪದ್ಮಭೂಷಣ ಡಾ.ನಾ.ಸು.ಹರ್ಡಿಕರ್ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಡಾ.ನಾ.ಸು.ಹರ್ಡಿಕರ್ ವೃತ್ತದಲ್ಲಿರುವ ಪುತ್ಥಳಿಗೆ ಭಾರತ ಸೇವಾದಳದ ಜಿಲ್ಲಾ ಘಟಕದಿಂದ ಗುರುವಾರ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.
ಭಾರತ ಸೇವಾ ದಳವು ಯುವ ಜನರಲ್ಲಿ ರಾಷ್ಟ್ರಭಕ್ತಿ, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಚಟುವಟಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವರ ಆದರ್ಶಗಳು ಎಲ್ಲರಿಗೂ ದಾರಿ ದೀಪವಾಗಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜತೆಗೆ ಸಮಾಜದ ಏಳಿಗೆಗೆ ಇಂದಿನ ಯುವಕರು ಸೇವಾ ಮನೋಭಾವದಿಂದ ದೇಶಕ್ಕಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಭಾರತ ಸೇವಾ ದಳದ ಜಿಲ್ಲಾ ಸಂಚಾಲಕಿ ರಾಣಿ ಮಾತನಾಡಿ, ಡಾ.ನಾ.ಸು. ಹರ್ಡಿಕರ್ ದೇಶದ ಯುವ ಜನತೆಗೆ ಶಿಸ್ತು, ಸೇವಾ ಮನೋಭಾವ ಹಾಗೂ ರಾಷ್ಟ್ರಭಕ್ತಿಯ ದಾರಿಯನ್ನು ತೋರಿದ ಮಹಾನ್ ನಾಯಕರು. ಅವರ ರೀತಿಯಲ್ಲೇ ಇಂದಿನ ಯುವ ಪೀಳಿಗೆ ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕಿದೆ. ಜತೆಗೆ ಸೇವಾದಳದ ಮೂಲಕ ಸಮಾಜ ಸೇವೆ, ಪರಿಸರ ಜಾಗೃತಿ, ರಾಷ್ಟ್ರೀಯ ಏಕತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ನಿರಂತರವಾಗಿ ಸಂಘಟನೆ ಮಾಡುತ್ತಿದೆ ಎಂದು ತಿಳಿಸಿದರು.
ಭಾರತ ಸೇವಾ ದಳದ ತಾಲೂಕು ಅಧ್ಯಕ್ಷ ಯುವರಾಜು, ಸಂಚಾಲಕ ಬಾಳೆಹಣ್ಣು ರಮೇಶ್, ಮುಖಂಡ ವೆಂಕಟೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net