ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಜಗತ್ತು ಆಧುನಿಕ ನಾಗಾಲೋಟದಲ್ಲಿ ಸಾಗುತ್ತಿದೆ. ಪದವಿ, ಐಶ್ವರ್ಯ, ಉನ್ನತ ಸ್ಥಾನಮಾನಗಳಿಗಾಗಿ ಮನುಷ್ಯ ಹಪಹಪಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಮನಸ್ಸಿನ ಶಾಂತಿ, ನೆಮ್ಮದಿ ಮಾಯವಾಗುತ್ತಿದೆ. ಮನಃಶಾಂತಿ, ಆತ್ಮಸ್ಥೈರ್ಯ ಹೆಚ್ಚಾಗಬೇಕಾದರೆ ಧಾರ್ಮಿಕ ಮನೋಭಾವದಿಂದ ಮಾತ್ರ ಸಾಧ್ಯ. ಬಾಲ್ಯದಿಂದಲೇ ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ನಮ್ಮ ಸನಾತನ ಧರ್ಮ, ಆಚಾರ-ವಿಚಾರಗಳ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಪಾಲಕರು ಮಾಡಬೇಕಿದೆ ಎಂದರು.