ಐಟಿಐ ತರಬೇತಿಯಿಂದ ಸ್ವಂತ ಉದ್ಯೋಗ ಸಾಧ್ಯ

ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿಯ ಚಂದ್ರಶೇಖರ ಭಾರತಿ ಕೈಗಾರಿಕಾ ಕೇಂದ್ರದಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಚ್.ವಿ.ಗೋಪಾಲ್, ನಾಗರಾಜ್, ಅಶೋಕ್ ನಾಡಿಗ್, ಸತೀಶ್ ಇತರರು ಇದ್ದರು.
ಅರಸೀಕೆರೆ ತಾಲೂಕಿನ ಮಾಲೇಕಲ್ ತಿರುಪತಿಯ ಚಂದ್ರಶೇಖರ ಭಾರತಿ ಕೈಗಾರಿಕಾ ಕೇಂದ್ರದಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಚ್.ವಿ.ಗೋಪಾಲ್, ನಾಗರಾಜ್, ಅಶೋಕ್ ನಾಡಿಗ್, ಸತೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • self-employment
ಅರಸೀಕೆರೆ ಗ್ರಾಮಾಂತರ ಎಸ್‌ಎಸ್‌ಎಲ್‌ಸಿ ನಂತರ ವಿದ್ಯಾರ್ಥಿಗಳು ಐಟಿಐ ತರಬೇತಿ ಪಡೆಯುವುದರಿಂದ ಸ್ವಂತ ಉದ್ಯೋಗ ಇಲ್ಲವೇ ವಿವಿಧ ಕಂಪನಿಗಳಲ್ಲಿ ನೌಕರಿ ಪಡೆಯುವ ಅವಕಾಶ ಹೆಚ್ಚಿವೆ ಎಂದು ಶ್ರೀ ಚಂದ್ರಶೇಖರ ಭಾರತಿ ಕೈಗಾರಿಕಾ ಸಂಸ್ಥೆಯ ಟ್ರಸ್ಟ್ ಕಾರ್ಯದರ್ಶಿ ಎಚ್.ವಿ. ಗೋಪಾಲ್ ತಿಳಿಸಿದರು.
ಕಸಬಾ ಹೋಬಳಿಯ ಅಗ್ಗುಂದ ಪಂಚಾಯಿತಿ ವ್ಯಾಪ್ತಿಯ ಮಾಲೆಕಲ್ ತಿರುಪತಿಯಲ್ಲಿರುವ ಶ್ರೀ ಚಂದ್ರಶೇಖರ ಭಾರತಿ ಕೈಗಾರಿಕಾ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಮೊದಲ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಪ್ರತಿವರ್ಷ ಸಂಸ್ಥೆಗೆ ವಿವಿಧ ಕಂಪನಿಗಳನ್ನು ಆಹ್ವಾನಿಸುತ್ತೇವೆ. ಅವರು ನಮ್ಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ಜತೆಗೆ ವೇತನವನ್ನೂ ನೀಡುತ್ತಾರೆ. ಈ ರೀತಿ ಆಯ್ಕೆಯಾದವರು ಇಂದು ಉತ್ತಮ ಸ್ಥಾನದಲ್ಲಿ ಇದ್ದಾರೆ ಎಂದು ತಿಳಿಸಿದರು.
ಕಾಲೇಜು ಅಧೀಕ್ಷಕ ಅಶೋಕ್ ನಾಡಿಗ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಬಹಳ ಮುಖ್ಯ. ಪ್ರಾರಂಭದಿಂದಲೇ ಕಲಿಕೆಯಲ್ಲಿ ಆಸಕ್ತಿ ವಹಿಸಬೇಕು. ತರಬೇತುದಾರರು ನೀಡುವ ಮಾರ್ಗದರ್ಶನವನ್ನು ಪಾಲಿಸಬೇಕು. ಆಗ ಮಾತ್ರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಟ್ರಸ್ಟಿ ಟಿ.ಆರ್. ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಗೆ ಹೆಚ್ಚಿನ ಆಸಕ್ತಿ ತೋರಿಸಬೇಕು. ಪಾಲಕರ ಶ್ರಮವನ್ನು ನೀವು ಸಾರ್ಥಕಪಡಿಸಬೇಕು. ಕಾಲೇಜಿನಲ್ಲಿ ಉತ್ತಮ ತರಬೇತಿ ದೊರಕುತ್ತದೆ. ಇದರಿಂದ ನೀವು ಸ್ವಂತ ಉದ್ಯೋಗ ಹೊಂದಬಹುದು ಎಂದು ತಿಳಿಸಿದರು.
ಪ್ರಾಂಶುಪಾಲ ಸತೀಶ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಕಾಲೇಜಿನಲ್ಲಿ ಪಾಲಿಸಬೇಕಾದ ನಿಯಮ ಹಾಗೂ ಕಲಿಕೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net