ಹಳ್ಳಿ ಮೈಸೂರು ಶಾಲೆ 125ನೇ ವರ್ಷಾಚರಣೆ ನಾಳೆ

125ನೇ ವರ್ಷಾಚರಣೆಗೆ ಸಿದ್ಧವಾಗಿರುವ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊರನೋಟ.
125ನೇ ವರ್ಷಾಚರಣೆಗೆ ಸಿದ್ಧವಾಗಿರುವ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊರನೋಟ.
Published on
ಹೊಳೆನರಸೀಪುರ : ತಾಲೂಕಿನ ಹಳ್ಳಿ ಮೈಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 125ನೇ ವರ್ಷಾಚರಣೆ ಕಾರ್ಯಕ್ರಮ ಫೆ. 19ರಂದು ನೆರವೇರಲಿದೆ ಎಂದು ಮುಖ್ಯ ಶಿಕ್ಷಕಿ ಮಿತ್ರಾದೇವಿ ತಿಳಿಸಿದರು.
1899ರಲ್ಲಿ ಪ್ರಾರಂಭವಾದ ಈ ಶಾಲೆ 1942 ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಯಿತು. 1992 ರಲ್ಲಿ ಮಾದರಿ ಶಾಲೆಯಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಶಾಸಕ ಮಂಜು, ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಡಿ. ರೇವಣ್ಣ ಲೋಕಾಯುಕ್ತ ಎಸ್ಪಿ ಉದೇಶ್, ಮುಖ್ಯಮಂತ್ರಿಗಳ ಆರೋಗ್ಯ ಸಲಹೆಗಾರ ಡಾ. ರವಿಕುಮಾರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವರಾಜು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.
ಈ ಶಾಲೆಯಿಂದ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಸರ್ಕಾರದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಇದ್ದಾರೆ. ಶಾಲೆಗೆ, ಗ್ರಾಮಕ್ಕೆ ಕೀರ್ತಿ ತಂದಿದೆ. 2024- 25 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪಿಎಂಶ್ರೀ ( ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್ ಇಂಡಿಯಾ)ಗೆ ಆಯ್ಕೆಯಾಗಿ ಅಭಿವೃದ್ಧಿ ಹೊಂದಿದೆ ಎಂದರು.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಎಲ್ಕೆಜಿ, ಯುಕೆಜಿ ಒಳಗೊಂಡಂತೆ 7ನೇ ತರಗತಿವರೆಗೆ ಒಟ್ಟು 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ಹೆಮ್ಮೆಯ ವಿಷಯವಾಗಿದೆ ಎಂದರು. ಪಿಎಂಶ್ರೀ ಯೋಜನೆಯಿಂದ ಶಾಲೆಗೆ ಮೂಲ ಸೌಕರ್ಯಗಳಾದ ಕರಾಟೆ, ಯೋಗ, ತಂತ್ರಜ್ಞಾನ ಆಧಾರಿತ ಶಿಕ್ಷಣ, ಸಿಸಿ ಕ್ಯಾಮರಾ, ಎಲ್‌ಕೆಜಿ, ಯುಕೆಜಿ ತರಗತಿ ಸೇರಿದಂತೆ ಹಲವಾರು ಸೌಲಭ್ಯಗಳು ದೊರಕಿವೆ. ಈ ಶಾಲೆಯು ಮಕ್ಕಳ ಸಂತಸದಾಯಕ ಕಲಿಕೆಗೆ ಪ್ರೇರಣೆಯಾಗಿದೆ ಎಂದರು. ಶಾಲೆಯ ಶೈಕ್ಷಣಿಕ ಪ್ರಗತಿಗೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಪಾಲಕರು ಕಾಳಜಿ ವಹಿಸಿದ್ದಾರೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ದಾಖಲಾಗಿ ಹೆಚ್ಚಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net