

ಸಕಲೇಶಪುರ:
ಪ್ರವಾದಿ ಮಹಮ್ಮದ್ ಅವರ 1501ನೇ ಜನ್ಮದಿನದ ಅಂಗವಾಗಿ ತಾಲೂಕಿನ ವಿವಿಧೆಡೆ ಮುಸ್ಲಿಮರು ಸಂತಸ ಹಾಗೂ ಸಂಭ್ರಮದಿಂದ ನಬಿ ದಿನವನ್ನು ಆಚರಿಸಿದರು.
ತಾಲೂಕಿನ ಹಾನುಬಾಳು, ಕಾಡುಮನೆ, ಮಾರನಹಳ್ಳಿ, ದೇಕ್ಲಾ, ರಕ್ಷಿದಿ, ಆನೆಮಹಲ್, ಕುಡುಗರಹಳ್ಳಿ, ಆಚಂಗಿ, ಹಲಸುಲಿಗೆ, ಸುಂಡೆಕೆರೆ, ಬಾಳ್ಳುಪೇಟೆ, ಹೊಸೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಬಿ ದಿನವನ್ನು ಆಚರಿಸಿ, ದೇಶದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆ ನೆಲೆಸಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.