ತಡೆಗೋಡೆಗೆ ಕಾರು ಅಪ್ಪಳಿಸಿ ಟೆಕ್ಕಿ ಸಾವು

ಅಪಘಾತಕ್ಕಿಡಾಗಿರುವ ತಮಿಳುನಾಡು ಮೂಲದ ಕಾರು.
ಅಪಘಾತಕ್ಕಿಡಾಗಿರುವ ತಮಿಳುನಾಡು ಮೂಲದ ಕಾರು.
Published on
ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ-75ರ ಗುಳಗಳಲೆ ಸಮೀಪ ಕಾರೊಂದು ತಡೆಗೋಡೆಗೆ ಅಪ್ಪಳಿಸಿದ ಪರಿಣಾಮ ಒಬ್ಬ ಟೆಕ್ಕಿ ಮೃತಪಟ್ಟಿದ್ದು, ನಾಲ್ವರು ಟೆಕ್ಕಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ತಮಿಳುನಾಡು ಮೂಲದ ಧನುಷ್ (25) ಮೃತರು. ಕಾರಿನಲ್ಲಿದ್ದ ವಶೀಕರಣ, ದಿನೇಶ್, ಶ್ರೀಕಾಂತ್, ಸುಬ್ರಹ್ಮಣ್ಯ ತೀವ್ರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಟೆಕ್ಕಿಗಳಾಗಿದ್ದ ಎಲ್ಲರೂ ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮಧ್ಯರಾತ್ರಿ ಇವರಿದ್ದ ಕಾರು ತಡೆಗೋಡೆಗೆ ಅಪ್ಪಳಿಸಿ ಮಗುಚಿ ಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡ ಇತರರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣ ಠಾಣೆ ಪೊಲೀಸ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net