ಆಲೂರು ತಾಲೂಕು ಪಾಳ್ಯ ಸಮೀಪದ ದಿಂಡಘಟ್ಟ (ಪಾಳ್ಯ) ಗ್ರಾಮದಲ್ಲಿ ಪ್ರೇರಣಾ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್‌ನಿಂದ ನಿರ್ಮಿಸಿರುವ ಪಂಚವಟಿ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಉಮೇಶ್, ಮಂಜುನಾಥ್, ಹರೀಶ್ ಇದ್ದರು.
Published on:
Copied
Follow Us
ಆಲೂರು: ಗ್ರಾಮೀಣ ಭಾಗದ ಮಕ್ಕಳಿಗೂ ನಗರಪ್ರದೇಶದ ಮಕ್ಕಳಿಗೆ ದೊರೆಯುವ ಮಟ್ಟದ ಗುಣಮಟ್ಟದ ಶಿಕ್ಷಣ ಸಿಗಬೇಕು. ಅವರ ಭವಿಷ್ಯವನ್ನು ಭದ್ರಗೊಳಿಸುವುದೇ ಶಿಕ್ಷಣ ಸಂಸ್ಥೆಗಳ ಮೂಲ ಉದ್ದೇಶವಾಗಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ತಾಲೂಕಿನ ಪಾಳ್ಯ ಸಮೀಪದ ದಿಂಡಘಟ್ಟ (ಪಾಳ್ಯ) ಗ್ರಾಮದಲ್ಲಿ ಪ್ರೇರಣಾ ಎಜುಕೇಷನ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಿರುವ ಪಂಚವಟಿ ಪಬ್ಲಿಕ್ ಶಾಲೆಯ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ನಗರ ಪ್ರದೇಶದಂತೆ ಉತ್ತಮ ಶಿಕ್ಷಣ ಪಡೆಯುವವರೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸು ನನಸಾಗುವುದಿಲ್ಲ. ಶಿಕ್ಷಣವು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ, ಮಕ್ಕಳಲ್ಲಿ ಜೀವನ ಮೌಲ್ಯ, ಸಂಸ್ಕಾರಗಳನ್ನು ಬೆಳೆಸುವಂತಿರಬೇಕು. ಆಗ ಮಾತ್ರ ಅವರು ಪರಿಪೂರ್ಣ ವ್ಯಕ್ತಿತ್ವ ಹೊಂದಿದ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪಂಚವಟಿ ಪಬ್ಲಿಕ್ ಶಾಲೆಯ ಉಮೇಶ್, ಮಂಜುನಾಥ್, ಹರೀಶ್, ಸಕಲೇಶಪುರ ಪುರಸಭೆ ಮಾಜಿ ಸದಸ್ಯ ಸುರೇಶ್, ಶೋಭಾ ಸುರೇಶ್, ಕಾಂತರಾಜ್ ಉಪಸ್ಥಿತರಿದ್ದರು.