ಪಟ್ಟಣದಲ್ಲಿ ಹಿಂದು ಜಾಗರಣಾ ವೇದಿಕೆ ಹಾಗೂ ಪರಿವರ್ತನ ಟ್ರಸ್ಟ್ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಭಾರತ ಅಂದೋಲನದಲ್ಲಿ ಮಾತನಾಡಿ, ಮಾದಕ ವಸ್ತುಗಳ ಸೇವನೆ ಮಾಡುವ ವ್ಯಕ್ತಿ ಮೊದಲ ತಮ್ಮ ಕುಟುಂಬದ ನೆಮ್ಮದಿಗೆ ಭಂಗ ತರಲಿದ್ದಾರೆ, ತರುವಾಯ ಸಮಾಜದ ಸ್ವಾಸ್ಥೃಕ್ಕೆ ಕುತ್ತು ತರಲಿದ್ದಾರೆ. ಆದ್ದರಿಂದ ಯುವ ಜನಾಂಗ ಮಾದಕ ವಸ್ತುಗಳಿಗೆ ಬಲಿಯಾಗದಂತೆ ಕಾಪಾಡುವ ಜವಾಬ್ದಾರಿ ನಮ್ಮ ನಿಮ್ಮ ಮೇಲಿದೆ. ದೇಶದ ಗಡಿಭಾಗದಲ್ಲಿ ವಿರೋಧಿ ರಾಷ್ಟ್ರಗಳು ದೇಶವನ್ನು ಕಬಳಿಸುವ ಸಂಚು ಮಾಡಿದರೆ ದೇಶದ ಒಳಗೆ ಯುವ ಜನತೆಯನ್ನು ಡ್ರಗ್ಸ್ ವ್ಯಸನಿಗಳನ್ನಾಗಿ ಮಾಡುವ ಮೂಲಕ ದೇಶದ ಅಂತರ್ಯವನ್ನು ದುರ್ಬಲ ಮಾಡುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.