ರೋಟರಿ ಮೂಲ ಉದ್ದೇಶವೇ ಸಮಾಜ ಸೇವೆ

ಧಾರವಾಡ ಜಿಲ್ಲೆಯ ಬೇಲೂರು-ಧಾರವಾಡ ರೋಟರಿ ಕ್ಲಬ್ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಚನ್ನಕೇಶವಸ್ವಾಮಿ ದೇಗುಲ ಮುಂಭಾಗ ಧ್ವಜ ಬದಲಾವಣೆ ಮಾಡಿಕೊಂಡರು. ಸಂದೀಪ್ ಹೊನ್ನಾವರ, ಗಣೇಶ್ ಇತರರು ಇದ್ದರು.
ಧಾರವಾಡ ಜಿಲ್ಲೆಯ ಬೇಲೂರು-ಧಾರವಾಡ ರೋಟರಿ ಕ್ಲಬ್ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಚನ್ನಕೇಶವಸ್ವಾಮಿ ದೇಗುಲ ಮುಂಭಾಗ ಧ್ವಜ ಬದಲಾವಣೆ ಮಾಡಿಕೊಂಡರು. ಸಂದೀಪ್ ಹೊನ್ನಾವರ, ಗಣೇಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Rotary's

ಬೇಲೂರು:

ಧಾರವಾಡ ಜಿಲ್ಲೆಯ ಬೇಲೂರು-ಧಾರವಾಡ ರೋಟರಿ ಕ್ಲಬ್ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ ನೇತೃತ್ವದಲ್ಲಿ ರೋಟರಿ ಕುಟುಂಬ ವರ್ಗದವರು ಬೇಲೂರಿನ ಶ್ರೀಚೆನ್ನಕೇಶವಸ್ವಾಮಿ ದೇಗುಲಕ್ಕೆ ಆಗಮಿಸಿದ ಸಂದರ್ಭ ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜ್‌ರೊಂದಿಗೆ ಭಾನುವಾರ ಸ್ನೇಹ ಮತ್ತು ಧ್ವಜ ಬದಲಾವಣೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಬೇಲೂರು ರೋಟರಿ ಕ್ಲಬ್ ಅಧ್ಯಕ್ಷ ಬಿ.ಬಿ.ಶಿವರಾಜು ಮಾತನಾಡಿ, ರೋಟರಿ ಸಂಸ್ಥೆಯ ಮೂಲ ಆಶಯವೇ ಸ್ನೇಹ, ಸೇವೆ ಹಾಗೂ ಸಮಾಜಮುಖಿ ಕಾರ್ಯ. ಧಾರವಾಡ ಜಿಲ್ಲೆಯ ಬೇಲೂರು-ಧಾರವಾಡ ಹಾಗೂ ಹಾಸನ ಜಿಲ್ಲೆಯ ಬೇಲೂರು ರೋಟರಿ ಕ್ಲಬ್‌ಗಳ ನಡುವೆ ಸ್ನೇಹ ಸೌಹಾರ್ದತೆ ಮತ್ತಷ್ಟು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಎರಡು ಕ್ಲಬ್‌ಗಳ ಸದಸ್ಯರು ಪರಸ್ಪರ ಪರಿಚಯ ಬೆಳೆಸಿಕೊಂಡು, ಮುಂದಿನ ದಿನಗಳಲ್ಲಿ ಆರೋಗ್ಯ, ಶಿಕ್ಷಣ, ಪರಿಸರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಒಟ್ಟಾಗಿ ಕೈಜೋಡಿಸುವ ಸಂಕಲ್ಪ ಮಾಡಿದ್ದೇವೆ ಎಂದರು.
ಧಾರವಡ ಜಿಲ್ಲೆಯ ಬೇಲೂರು-ಧಾರವಾಡ ರೋಟರಿ ಕ್ಲಬ್ ಅಧ್ಯಕ್ಷ ಸುಧೀಂದ್ರ ದೇಶಪಾಂಡೆ ಮಾತನಾಡಿ, ವಿಶ್ವವಿಖ್ಯಾತ ಬೇಲೂರಿನ ಶ್ರೀಚೆನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡುವುದು ಹಾಗೂ ಇಲ್ಲಿನ ರೋಟರಿ ಕ್ಲಬ್ ಸದಸ್ಯರೊಂದಿಗೆ ಧ್ವಜ ಬದಲಾವಣೆ ಕಾರ್ಯಕ್ರಮ ಸಂತಸ ನೀಡಿದೆ ಎಂದರು.
ಜೋನ್ 8ರ ಸಹಾಯಕ ಪ್ರಾಂತಪಾಲ ಗಣೇಶ್ ಮಾತನಾಡಿದರು.
ಬೇಲೂರು ಧಾರವಾಡ ರೋಟರಿ ಕ್ಲಬ್ ಕಾರ್ಯದರ್ಶಿ ಸಂದೀಪ್ ಹೊನ್ನಾವರ, ಬೇಲೂರು ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net