ಪ್ರವಾದಿ ಮೊಹಮ್ಮದ್ ಮುಸ್ತಫಾ ಸಂದೇಶಗಳ ಸ್ಮರಣೆ

ಪ್ರವಾದಿ ಮೊಹಮ್ಮದ್ ಮುಸ್ತಫಾ ಅವರ 1501ನೇ ವರ್ಷದ ಜನ್ಮದಿನದ ಅಂಗವಾಗಿ ಪಂಪ್ ಹೌಸ್ ರಸ್ತೆ ಮೂಲಕ ಬದ್ರಿಯಾ ಜುಮ್ಮಾ ಮಸೀದಿವರೆಗೆ ಮುಸಲ್ಮಾನರು ಮೆರವಣಿಗೆಯಲ್ಲಿ ತೆರಳಿದರು. ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಅಹಮದ್ ರಿಯಾಜ್, ಪುರಸಭೆ ಸದಸ್ಯ ಜಮಾಲುದ್ದೀನ್, ಮಾಜಿ ಸದಸ್ಯ ಜುಬೇರ್ ಅಹಮದ್, ಮುಖಂಡರಾದ ಅಬ್ದುಲ್ ರೆಹಮಾನ್, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಸುಲೇಮಾನ್ ಇತರರಿದ್ದರು.

Published on

ಬೇಲೂರು:

ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸೀದಿಯಿಂದ ಬುಧವಾರ ಪ್ರವಾದಿ ಮೊಹಮ್ಮದ್ ಮುಸ್ತಫಾ 1501ನೇ ವರ್ಷದ ಜನ್ಮದಿನ ಆಚರಿಸಲಾಯಿತು.

ಕಾರ್ಯಕ್ರಮ ಅಂಗವಾಗಿ ಪಂಪ್‌ಹೌಸ್ ರಸ್ತೆಯಿಂದ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಂತರ ಪಂಪ್‌ಹೌಸ್ ರಸ್ತೆಯಿಂದ ಮುಖ್ಯ ರಸ್ತೆಯ ಮೂಲಕ ಬದ್ರಿಯಾ ಜುಮ್ಮಾ ಮಸೀದಿಗೆ ಮೆರವಣಿಗೆ ತಲುಪಿತು. ಈ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಮುಸ್ತಫಾ ಅವರ ಜೀವನ, ಆದರ್ಶ, ಮಾನವೀಯತೆ ಹಾಗೂ ಸಂದೇಶಗಳನ್ನು ಸಾರುವ ಹಾಡುಗಳನ್ನು ಹಾಡಲಾಯಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಿ ಪ್ರವಾದಿ ಮೇಲಿನ ಗೌರವ ಮತ್ತು ಭಕ್ತಿಯನ್ನು ವ್ಯಕ್ತಪಡಿಸಿದರು. ಬದ್ರಿಯಾ ಜುಮ್ಮಾ ಮಸೀದಿಯ ಗುರುಗಳು ಉಪಸ್ಥಿತರಿದ್ದರು. ಪ್ರವಾದಿ ಮೊಹಮ್ಮದ್ ಮುಸ್ತಫಾ ಅವರ ಜೀವನಾದರ್ಶ ಹಾಗೂ ಸಮಾಜಕ್ಕೆ ಅವರು ನೀಡಿದ ಸಂದೇಶಗಳ ಕುರಿತು ಮಾತನಾಡಿದರು.
ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಜನಾಬ್ ಅಹಮದ್ ರಿಯಾಜ್, ಪುರಸಭೆ ಸದಸ್ಯ ಜಮಾಲುದ್ದೀನ್, ಮಾಜಿ ಸದಸ್ಯ ಜುಬೇರ್ ಅಹಮದ್, ಮುಖಂಡರಾದ ಅಬ್ದುಲ್ ರೆಹಮಾನ್, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಸುಲೇಮಾನ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net