ದೊಡ್ಡಕಾಡನೂರು, ಮೆಣಗನಹಳ್ಳಿ ದಾಳ, ಗೌಡನಹಳ್ಳಿ ಜವರಿ ಕೊಪ್ಪಲು, ಮೂಡಲ ಕೊಪ್ಪಲು, ಬಾಚನಹಳ್ಳಿ, ಸಿ.ಹಿಂದಲಹಳ್ಳಿ ಗ್ರಾಮದ ರೈತರು ಕಲ್ಲೋಡೆ ಬಾರೆ ಕಾವಲಿನಲ್ಲಿರುವ ಕ್ರಷರ್‌ಗಳನ್ನು ಸ್ಥಗಿತ ಮಾಡಬೇಕೆಂದು ಒತ್ತಾಯಿಸಿ ಶಾಸಕರಿಗೆ ಮನವಿ ಸಲ್ಲಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುತ್ತದೆ. ಕಲ್ಲೋಡೆ ಬಾರೆ ಕಾವಲು ಭೂ ಪ್ರದೇಶವನ್ನು ಜಾನುವಾರಗಳ ಮೇವಿಗಾಗಿ ಮೀಸಲಿಡಲಾಗಿದೆ. ಅಧಿಕಾರಿಗಳು ನಿಯಮಬಾಹಿರವಾಗಿ ಈ ಪ್ರದೇಶವನ್ನು ಕ್ರಷರ್‌ಗಳಿಗೆ ಮಂಜೂರು ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ನಾನೂ ಇದ್ದು ಸಮಿತಿ ಸದಸ್ಯರನ್ನೇ ಸ್ಥಳ ಪರಿಶೀಲಿಸಲು ಕ್ರಮ ವಹಿಸಲು ಮುಂದುವರಿಯಲಾಗುವುದು. ಸುತ್ತಮುತ್ತಲ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಂಡು ಕ್ರಷರ್‌ಗಳನ್ನು ಸ್ಥಗಿತ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.