ಎಡಕುಮೇರಿ ಸಮೀಪ ರೈಲು ಹಳಿ ಮೇಲೆ ಭೂಕುಸಿತ

 7 ರೈಲುಗಳ ಸಂಚಾರ ರದ್ದು
7 ರೈಲುಗಳ ಸಂಚಾರ ರದ್ದು
Published on
ಸಕಲೇಶಪುರ: ತಾಲೂಕಿನ ಎಡಕುಮೇರಿ ಸಮೀಪ ರೈಲು ಹಳಿಯ ಮೇಲೆ ಭೂಕುಸಿತ ಸಂಭವಿಸಿದ ಪರಿಣಾಮ
ಈ ಭಾಗದ ರೈಲುಗಳ ಸಂಚಾರ ರದ್ದು ಮಾಡಲಾಗಿದೆ.
ಶನಿವಾರ ರಾತ್ರಿ 9 ಗಂಟೆಯ ವೇಳೆ ಎಡಕುಮೇರಿ ರೈಲ್ವೆ ನಿಲ್ದಾಣ ಸಮೀಪ ಭೂಕುಸಿತ ಸಂಭವಿಸಿತು.
ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾಜಿಕ್ಕೋಡ್- ಬೆಂಗಳೂರು ರೈಲನ್ನು ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣದಲ್ಲೇ ನಿಲ್ಲಿಸಿ ನಂತರ ಮಂಗಳೂರಿಗೆ ಕಳುಹಿಸಲಾಯಿತು. ಮಂಗಳೂರಿಗೆ ತೆರಳಬೇಕಿದ್ದ ಕಾರವಾರ ಎಕ್ಸ್‌ಪ್ರೆಸ್ ರೈಲನ್ನು ಹಾಸನ ರೈಲು ನಿಲ್ದಾಣದಿಂದ ಬದಲಿ ಮಾರ್ಗದಲ್ಲಿ ಕಳುಹಿಸಿ ಕೊಡಲಾಯಿತು.
ಭೂಕುಸಿತದಿಂದ ಈ ಮಾರ್ಗದಲ್ಲಿ ಸಂಚರಿಸುವ 7 ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ
ಸ್ಥಗಿತ ಗೊಳಿಸಲಾಗಿದೆ. ಕಾರ್ಯಪ್ರವೃತ್ತರಾಗಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಮೈಸೂರಿನಿಂದ
ಹೆಚ್ಚುವರಿ ಕಾರ್ಮಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಮಣ್ಣು ತೆರವು ಕಾಮಗಾರಿ ಆರಂಭಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net