ರೈಲ್ವೆ ಕ್ರಾಸಿಂಗ್‌ನಿಂದ ಸಾರ್ವಜನಿಕರಿಗೆ ತೊಂದರೆ

ಆಲೂರು ಕಸಬಾ ಯಡೂರು ರೈಲ್ವೆ ಕ್ರಾಸಿಂಗ್ ಬಳಿ ಕೇಂದ್ರ ರೈಲ್ವೆ ರಾಜ್ಯ ಸಚಿವರ ನಿರ್ದೇಶನದಂತೆ ಶಾಸಕ ಸಿಮೆಂಟ್ ಮಂಜು ಸ್ಥಳ ಪರಿಶೀಲಿಸಿದರು. ಹುಣಸವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಮಾವನೂರು ಮೋಹನ್, ಬಿಜೆಪಿಯ ಮುಖಂಡ ನಂಜುಂಡಪ್ಪ, ಹೇಮಂತ್, ಜೆಸಿಪಿ ಲೋಕೇಶ್ ಸೇರಿದಂತೆ  ಇತರರು ಇದ್ದರು.
ಆಲೂರು ಕಸಬಾ ಯಡೂರು ರೈಲ್ವೆ ಕ್ರಾಸಿಂಗ್ ಬಳಿ ಕೇಂದ್ರ ರೈಲ್ವೆ ರಾಜ್ಯ ಸಚಿವರ ನಿರ್ದೇಶನದಂತೆ ಶಾಸಕ ಸಿಮೆಂಟ್ ಮಂಜು ಸ್ಥಳ ಪರಿಶೀಲಿಸಿದರು. ಹುಣಸವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಮಾವನೂರು ಮೋಹನ್, ಬಿಜೆಪಿಯ ಮುಖಂಡ ನಂಜುಂಡಪ್ಪ, ಹೇಮಂತ್, ಜೆಸಿಪಿ ಲೋಕೇಶ್ ಸೇರಿದಂತೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಡರ್‌ಪಾಸ್ ಅಥವಾ ಫ್ಲೈ ಓವರ್ ರಸ್ತೆ ನಿರ್ಮಾಣಕ್ಕೆ ಮನವಿ
  • ಸ್ಥಳ ಪರಿಶೀಲಿಸಿದ ಶಾಸಕ ಸಿಮೆಂಟ್ ಮಂಜು
ಆಲೂರು: ತಾಲೂಕಿನಲ್ಲಿ ರೈಲ್ವೆ ಕ್ರಾಸಿಂಗ್ ಮೇಲೆ ಹಾದು ಹೋಗುವ ಗ್ರಾಮಗಳಿಗೆ ರೈಲ್ವೆ ಅಂಡರ್‌ಪಾಸ್ ಅಥವಾ ಫ್ಲೈ ಓವರ್ ರಸ್ತೆ ನಿರ್ಮಾಣ ಮಾಡಬೇಕೆಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ತಾಲೂಕಿನ ಯಡೂರು, ಹುಣಸುವಳ್ಳಿ ಗ್ರಾಮಗಳ ಬಳಿ ಹಾದು ಹೋಗಿರುವ ರೈಲ್ವೆಯ ಅಳಿಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕ್ಷೇತ್ರದಲ್ಲಿ ರೈಲ್ವೆ ಕ್ರಾಸಿಂಗ್ ಮೂಲಕ ಅಂಬೇಡ್ಕರ್ ನಗರ, ಹಳೆ ಆಲೂರು, ಮಡಬಲು ಸೇರಿದಂತೆ ಹಲವು ಗ್ರಾಮಗಳಿಗೆ ನಿತ್ಯ ಜನಸಾಮಾನ್ಯರು ಓಡಾಡುತ್ತಾರೆ. ಗ್ರಾಮಗಳಲ್ಲಿ ಆಕಸ್ಮಿಕ ಅವಘಡಗಳು ಎದುರಾದಾಗ ರೈಲ್ವೆ ಗೇಟ್ ಬಂದ್ ಮಾಡಿದ ಸಂದರ್ಭದಲ್ಲಿ ತುರ್ತು ಸೇವೆಗೆ ಆಂಬುಲೆನ್ಸ್ ಇನ್ನಿತರೆ ವಾಹನಗಳು ಓಡಾಡಲು ಸಾಧ್ಯವಾಗುವುದಿಲ್ಲ. ರೈಲುಗಳು ಚಲಿಸುವ ಸಂದರ್ಭದಲ್ಲಿ ಸಾರ್ವಜನಿಕರು ಓಡಾಡಲು ಸಹ ತೊಂದರೆಯಾಗಿದೆ. ಕೂಡಲೆ ರೈಲ್ವೆ ಹಳಿಗಳ ಮೇಲೆ ಅಥವಾ ಕೆಳಗೆ ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಸಚಿವರ ನಿರ್ದೇಶನದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ಗ್ರಾಮಗಳಿಗೆ ಹಾದು ಹೋಗುವ ಸ್ಥಳಗಳಲ್ಲಿ ರೈಲ್ವೆ ಹಳಿಗಳ ಮೇಲೆ ಅಥವಾ ಕೆಳಗಡೆ ಓಡಾಡಲು ರಸ್ತೆ ನಿರ್ಮಾಣ ಮಾಡಿ ಜನಸಾಮಾನ್ಯರ, ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲು ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಹುಣಸವಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯ ಮಾವನೂರು ಮೋಹನ್, ಬಿಜೆಪಿಯ ಮುಖಂಡ ನಂಜುಂಡಪ್ಪ, ಹೇಮಂತ್, ಜೆಸಿಪಿ ಲೋಕೇಶ್ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net