ನಿಯಮ ಪಾಲಿಸದ ಮದ್ಯದಂಗಡಿಗಳ ಮೇಲೆ ದಾಳಿ

ಹೊಳೆನರಸೀಪುರ ತಾಲೂಕಿನ ಮದ್ಯದಂಗಡಿಗಳ ಸ್ಥಿತಿಗತಿ ಪರಿಶೀಲಿಸಿದ ಚಿಕ್ಕಮಗಳೂರಿನ ಅಬಕಾರಿ ಆಯುಕ್ತೆ ಡಿ.ರೂಪಾ ಸಿಬ್ಬಂದಿ ತಂಡ.  ಡಿವೈಎಸ್ಪಿ ಕೀರ್ತಿಕುಮಾರ್, ನಿರೀಕ್ಷಕ ಪೃಥ್ವಿ, ಹೊಳೆನರಸೀಪುರ ವೃತ್ತನಿರೀಕ್ಷಕ ಪಾಂಡುರಂಗ ಇದ್ದರು.
ಹೊಳೆನರಸೀಪುರ ತಾಲೂಕಿನ ಮದ್ಯದಂಗಡಿಗಳ ಸ್ಥಿತಿಗತಿ ಪರಿಶೀಲಿಸಿದ ಚಿಕ್ಕಮಗಳೂರಿನ ಅಬಕಾರಿ ಆಯುಕ್ತೆ ಡಿ.ರೂಪಾ ಸಿಬ್ಬಂದಿ ತಂಡ. ಡಿವೈಎಸ್ಪಿ ಕೀರ್ತಿಕುಮಾರ್, ನಿರೀಕ್ಷಕ ಪೃಥ್ವಿ, ಹೊಳೆನರಸೀಪುರ ವೃತ್ತನಿರೀಕ್ಷಕ ಪಾಂಡುರಂಗ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಬಕಾರಿ ಆಯುಕ್ತರ ನೇತೃತ್ವದ ತಂಡದಿಂದ ಮೇಜರ್ ಸರ್ಜರಿ
  • 11 ಕೇಂದ್ರಗಳ ಮೇಲೆ ಪ್ರಕರಣ
ಹೊಳೆನರಸೀಪುರ: ತಾಲೂಕಿನಲ್ಲಿ ನಿಯಮ ಪಾಲಿಸದ ಮದ್ಯದಂಗಡಿಗಳ ಮೇಲೆ ಅಬಕಾರಿ ಆಯುಕ್ತೆ ಡಿ.ರೂಪಾ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತು.
ಸರ್ಕಾರದ ಆದೇಶದಂತೆ ಮದ್ಯದಂಗಡಿಗಳ ನಿರ್ವಹಣೆಯಲ್ಲಿ ಆಗಿರುವ ಲೋಪದೋಷಗಳನ್ನು ಪರಿಶೀಲಿಸಿ, ಕ್ರಮಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದಲ್ಲಿ ದಾಳಿ ನಡೆಸಲಾಗಿದೆ. ತಾಲೂಕಿನಲ್ಲಿ ಒಟ್ಟು 43 ಅಬಕಾರಿ ಲೈಸನ್ಸ್ ಪಡೆದುಕೊಂಡಿರುವ ಮದ್ಯ ಮಾರಾಟದ ಅಂಗಡಿಗಳು ವ್ಯಾಪಾರ ನಡೆಸಿವೆ. ಇವುಗಳಲ್ಲಿ 11 ಮದ್ಯದಂಗಡಿಗಳ ಮೇಲೆ ನಾನಾ ಪ್ರಕರಣ ದಾಖಲಿಸಿದೆ. ಕೌಂಟರ್‌ನಲ್ಲೇ ಕುಡಿಯಲು ನೀಡುವ , ಸ್ವಚ್ಛತೆ ಇಲ್ಲದ, ರೆಸ್ಟೋರೆಂಟ್‌ಗಳಲ್ಲಿ ಉತ್ತಮ ವಾತಾವರಣ ಇಲ್ಲದೆ, ಗಬ್ಬೆದ್ದು ನಾರುವ ಅಂಗಡಿಗಳಿಗೆ ನೋಟಿಸ್ ನೀಡಿ ಪ್ರಕರಣ ದಾಖಲಿಸಿದೆ. ಬಹುಮುಖ್ಯವಾಗಿ ನಿಗದಿತ ಎಂಆರ್‌ಪಿಗಿಂತಲೂ ಅಧಿಕ ಹಣಕ್ಕೆ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೂ ಕ್ರಮಕೈಗೊಳ್ಳಲಾಗಿದೆ. ಪರವಾನಗಿ ಪಡೆಯುವಾಗ ನೀಡಿರುವ ನೀಲಿ ನಕ್ಷೆಯಲ್ಲಿ ಬದಲಾವಣೆ ಮತ್ತು ರೆಸ್ಟೋರೆಂಟ್ ಮತ್ತು ಬಾರ್‌ಗಳಲ್ಲಿ ಸರಿಯಾಗಿ ವ್ಯವಸ್ಥೆ ಮಾಡದಿರುವ ಸನ್ನದುದಾರರ ಮೇಲೂ ಕ್ರಮಕೈಗೊಳ್ಳಲಾಗಿದೆ. ಹೊರ ಕ್ರೀಡೆಗಳನ್ನು ಸ್ಥಗಿತಗೊಳಿಸಿದ್ದ ಕಾರಣಕ್ಕಾಗಿ ಇತ್ತೀಚೆಗೆ ಪರವಾನಗಿ ಪಡೆದ ಸೋಷಿಯಲ್ ಕ್ಲಬ್‌ನ ಮದ್ಯದಂಗಡಿಗೂ ಎಚ್ಚರಿಕೆ ಪತ್ರ ನೀಡಲಾಗಿದೆ. ಮದ್ಯ ಅಕ್ರಮ ಮಾರಾಟ ಪ್ರಕರಣ ಕಂಡು ಬಂದಿರುವ ಅಂಗಡಿಗಳಿಗೂ ಕ್ರಮಕ್ಕೆ ಆದೇಶಿಸಲಾಗಿದೆ.
ಪಟ್ಟಣದ ಅರಕಲಗೂಡು ರಸ್ತೆಯಲ್ಲಿರುವ ಬಾರ್‌ಗಳು, ಮೈಸೂರು ರಸ್ತೆಯ ಹಳ್ಳಿಮೈಸೂರು ತಿರುವಿನಲ್ಲಿನ ಬಾರ್ ಮತ್ತು ದೊಡ್ಡಕಾಡನೂರು ಗ್ರಾಮದ ಮದ್ಯದಂಗಡಿ ಹಾಗೂ ಇನ್ನಿತರ ಬಾರ್‌ಗಳ ಮುಂದೆ ಪಾರ್ಕಿಂಗ್‌ಗೆ ಜಾಗ ಇಲ್ಲದೆ ರಸ್ತೆಗೆ ವಾಹನ ನಿಲುಗಡೆಯಾಗುತ್ತಿದೆ. ಇವುಗಳ ಪರವಾನಗಿ ರದ್ದುಗೊಳಿಸಿ ಬೇರೆಡೆ ಅನುಕೂಲತೆ ಮಾಡಿ ಎಂದು ಸಾರ್ವಜನಿಕರು ದೂರು ನೀಡಿದ್ದರ ಮೇಲೂ ಎಚ್ಚರಿಕೆ ನೀಡಲಾಗಿದೆ.'
ಚಿಕ್ಕಮಗಳೂರು ಅಬಕಾರಿ ಡಿವೈಎಸ್ಪಿ ಕೀರ್ತಿಕುಮಾರ್, ನಿರೀಕ್ಷಕ ಪೃಥ್ವಿ, ಹೊಳೆನರಸೀಪುರ ವೃತ್ತನಿರೀಕ್ಷಕ ಪಾಂಡುರಂಗ ಮತ್ತು ಸಿಬ್ಬಂದಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net