ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಕೆ

 ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಬೆಳೆ ನಾಶ ಪಡಿಸುತ್ತಿದ್ದ ಕಾಡಾನೆಗಳ ಹಿಂಡಿನ ನೇತೃತ್ವ ವಹಿಸುತ್ತಿದ್ದ ಬೀಟಮ್ಮ-2 ಗುಂಪಿನ ಹೆಣ್ಣಾನೆಗೆ ಸಾಕಾನೆಗಳ ಸಹಾಯದೊಂದಿಗೆ ರೇಡಿಯೋ ಕಾಲರ್ ಅಳವಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಬೆಳೆ ನಾಶ ಪಡಿಸುತ್ತಿದ್ದ ಕಾಡಾನೆಗಳ ಹಿಂಡಿನ ನೇತೃತ್ವ ವಹಿಸುತ್ತಿದ್ದ ಬೀಟಮ್ಮ-2 ಗುಂಪಿನ ಹೆಣ್ಣಾನೆಗೆ ಸಾಕಾನೆಗಳ ಸಹಾಯದೊಂದಿಗೆ ರೇಡಿಯೋ ಕಾಲರ್ ಅಳವಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ.
Published on

ಪ್ರಮುಖ ಮುಖ್ಯಾಂಶಗಳು

  • Radio collar
ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶ ಪಡಿಸುತ್ತಿದ್ದ ಕಾಡಾನೆಗಳ ಹಿಂಡಿನ ನೇತೃತ್ವ ವಹಿಸುತ್ತಿದ್ದ ಬೀಟಮ್ಮ-2 ಗುಂಪಿನ ಹೆಣ್ಣಾನೆಯನ್ನು ಭಾನುವಾರ ಬಾಸೂರ ಗ್ರಾಮದ ಕಾಫಿ ತೋಟದಲ್ಲಿ ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿದರು.
ಕಳೆದ ಮೂರ‌್ನಾಲ್ಕು ದಿನಗಳ ಹಿಂದೆಯೇ ಬೇಲೂರು ತಾಲೂಕಿಗೆ ಆಗಮಿಸಿದ್ದ ಕುಮ್ಕಿ ಸಾಕಾನೆಗಳಾದ ಭೀಮ, ಶ್ರೀಕಂಠ, ಧನಂಜಯ, ಅಯ್ಯಪ್ಪ, ಶ್ರೀರಾಮ, ಹರ್ಷ ಆನೆಗಳೊಂದಿಗೆ ಶನಿವಾರ ಒಂಟಿ ಕೋರೆ ಕಾಡಾನೆಯನ್ನು ಸೆರೆ ಹಿಡಿದು ದುಬಾರೆ ಅರಣ್ಯಕ್ಕೆ ಕಳುಹಿಸಲಾಗಿತ್ತು. ಅದೇ ರೀತಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ಬೆಳೆ ನಾಶದೊಂದಿಗೆ ಸಾರ್ವಜನಿಕರಿಗೆ ಉಪಟಳ ನೀಡುತಿದ್ದ ಬೀಟಮ್ಮ-2 ಗುಂಪಿನ ನೇತೃತ್ವದ ವಹಿಸಿ ಮುಂದೆ ಸಾಗುವ 30 ರಿಂದ 35 ವರ್ಷ ವಯಸ್ಸಿನ ಹೆಣ್ಣು ಕಾಡಾನೆಯನ್ನು ಕಾರ್ಯಚರಣೆಯಲ್ಲಿ ಗುಂಪಿನಿಂದ ಬೇರ್ಪಡಿಸಿ ಒಂಟಿಯಾಗಿಸಿ ಅರೇಹಳ್ಳಿ ಹೋಬಳಿಯ ಬಾಸೂರ ಗ್ರಾಮ ಸಮೀಪದ ಕಾಫಿ ತೋಟದಲ್ಲಿ ಅರಣ್ಯ ಇಲಾಖೆಯ ತಜ್ಞರು ಅರವಳಿಕೆ ಚುಚ್ಚುಮದ್ದು ನೀಡಿದರು. ಆದರೆ ಇದರಿಂದ ಬೆದರಿದ ಆನೆ ಸ್ವಲ್ಪ ದೂರಕ್ಕೆ ಓಡಿ ಹೋಗಿ ನೆಲಕ್ಕುರುಳಿತು. ಈ ಸಂದರ್ಭ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆಗಳ ಸಹಕಾರದಿಂದ ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಿದರು. ನಂತರ ಅರಿವಳಿಕೆ ಚುಚ್ಚುಮದ್ದು ನೀಡಿದ್ದ ಆನೆಯ ಮೇಲೆ ಸಿಬ್ಬಂದಿ ಹೆಚ್ಚಿನ ನಿಗಾವಹಿಸಿ ಅದು ಪೂರ್ಣ ಪ್ರಮಾಣದಲ್ಲಿ ಎದ್ದು ಓಡಾಡುವಂತಾದಾಗ ಅಲ್ಲಿಯೇ ಕಾಡಿನಲ್ಲಿ ಬಿಟ್ಟರು.
ಅಲ್ಲದೆ ಇದರೊಂದಿಗೆ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟು ತೋಟ, ಗದ್ದೆಗಳಿಗೆ ನುಗ್ಗಿ ಉಪಟಳ ನೀಡುತಿದ್ದ ಡಿಸ್‌ಪ್ಯಾಚ್ ಹರ್ಡ್ ಹೆಸರಿನ 20ಕ್ಕೂ ಹೆಚ್ಚು ಕಾಡಾನೆಗಳ ಗುಂಪಿನ ನೇತೃತ್ವ ವಹಿಸುತಿದ್ದ ಮತ್ತೊಂದು ಹೆಣ್ಣು ಕಾಡಾನೆಯನ್ನೂ ಕಾನಳ್ಳಿ ಅರಣ್ಯದಲ್ಲಿ ಗುಂಪಿನಿಂದ ಬೇರ್ಪಡಿಸಿ ಅದಕ್ಕೂ ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದರು. ಆದರೆ ಅರವಳಿಕೆ ಚುಚ್ಚುಮದ್ದು ನೀಡಲು ಎರಡು ಮೂರು ಬಾರಿ ಪ್ರಯತ್ನಿಸಿದರೂ ತಪ್ಪಿಸಿಕೊಂಡಿತು. ಸಂಜೆ ಕತ್ತಲಾಗಿದ್ದರಿಂದ ಹಿರಿಯ ಅಧಿಕಾರಿಗಳಿಂದ ಮುನ್ಸೂಚನೆ ಬರುವರೆಗೂ ಕಾರ್ಯಚರಣೆ ಮುಂದೂಡಿ ಕುಮ್ಕಿ ಸಾಕಾನೆಗಳೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಿಕ್ಕೋಡು ಸಮೀಪದ ಆನೆ ಕ್ಯಾಂಪ್‌ಗೆ ವಾಪಸ್ಸಾದರು.
ಕಾರ್ಯಚರಣೆಯಲ್ಲಿ ಕುಮ್ಕಿ ಸಾಕಾನೆಗಳೊಂದಿಗೆ ಡಿಎಫ್‌ಒ ಸೌರಬ್ ಕುಮಾರ್, ಇಟಿಎಫ್ ಎಸಿಎಫ್ ಉಮಾಪತಿ, ಆರ್‌ಎಫ್‌ಒ ಯತೀಶ್ ಸೇರಿದಂತೆ ಚನ್ನರಾಯಪ್ಪಣ, ಸಕಲೇಶಪುರ, ಹೊಳೇನರಸೀಪುರ ವಲಯ ಅರಣ್ಯಾಧಿಕಾರಿಗಳು ಮತ್ತು ಇಟಿಎಫ್, ಆರ್‌ಆರ್‌ಟಿ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net