ವಾಲಿಬಾಲ್ ಟೂರ್ನಿಗೆ ಆರ್.ಖುಷಿ ಆಯ್ಕೆ

 ಆರ್.ಖುಷಿ
ಆರ್.ಖುಷಿ
Published on

ಪ್ರಮುಖ ಮುಖ್ಯಾಂಶಗಳು

  • ರಾಷ್ಟ್ರೀಯ ಮಟ್ಟದ ಸಬ್ ಜೂನಿಯರ್ ವಾಲಿಬಾಲ್ ಟೂರ್ನಿ
ಹಿರೀಸಾವೆ: ಫೆ. 24 ರಿಂದ ಮಾರ್ಚ್ 1 ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಸಬ್ ಜೂನಿಯರ್ ವಾಲಿಬಾಲ್ ಟೂರ್ನಿಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಹಾಸನದ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಆರ್.ಖುಷಿ ಆಯ್ಕೆಯಾಗಿದ್ದಾಳೆ.
ಹಾಸನದ ಸರ್ಕಾರಿ ಕ್ರೀಡಾ ಹಾಸ್ಟೆಲ್‌ನಲ್ಲಿ ತರಬೇತುದಾರ ಹೋಬಳಿಯ ಸಬ್ಬನಹಳ್ಳಿ ಗ್ರಾಮದ ರಮೇಶ್ ಅವರಿಂದ ಉತ್ತಮ ತರಬೇತಿ ಪಡೆಯುತ್ತಿದ್ದು ಪಟ್ಟಣದ ಕುವೆಂಪುನಗರ ನಿವಾಸಿಗಳಾದ ರೋಡ್ ರವಿ ಹಾಗೂ ಮಮತಾ ಅವರ ಪುತ್ರಿ ಇವರು ಚಿಕ್ಕವಯಸ್ಸಿನಲ್ಲಿ ತನ್ನ ಅದ್ಭುತ ಆಟದ ಕೌಶಲ ಚುರುಕು ಚಲನೆ ಮತ್ತು ತಂಡದ ಸಹಕಾರದಿಂದ ಗಮನ ಸೆಳೆದಿರುವ ಖುಷಿ, ಇದೀಗ ರಾಜ್ಯ ತಂಡದ ಪರವಾಗಿ ರಾಷ್ಟ್ರಮಟ್ಟದಲ್ಲಿ ಕಣಕ್ಕಿಳಿಯಲಿದ್ದಾರೆ. ಸಂಜೆ ಅಭ್ಯಾಸಕ್ಕೆ ಮೀಸಲಿಡುತ್ತೇನೆ. ದೇಶದಲ್ಲಿ ಕರ್ನಾಟಕಕ್ಕೆ ಹೆಸರು ತರುವುದೇ ನನ್ನ ಕನಸು ಎಂದು ವಿಜಯವಾಣಿಗೆ ತಿಳಿಸಿದ್ದಾರೆ. ಶಾಲಾ ಆಡಳಿತ ಮಂಡಳಿ, ಪಾಲಕರು ಹಾಗೂ ಗ್ರಾಪಂ ಸದಸ್ಯೆ ಭಾಗ್ಯಲಕ್ಷ್ಮೀ ಮಂಜುನಾಥ್ ಅಭಿನಂದಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net