ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲನೆ

ಅರಕಲಗೂಡು ಮುಖ್ಯ ರಸ್ತೆಗೆ ಹಾಕಿರುವ ಡಾಂಬರ್ ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಕೆಶಿಪ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರೈತ ಮುಖಂಡ ಜಗದೀಶ್, ಸ್ಥಳೀಯರು ಇದ್ದರು.
ಅರಕಲಗೂಡು ಮುಖ್ಯ ರಸ್ತೆಗೆ ಹಾಕಿರುವ ಡಾಂಬರ್ ಕಳಪೆ ಕಾಮಗಾರಿ ಆರೋಪದ ಹಿನ್ನೆಲೆಯಲ್ಲಿ ಕೆಶಿಪ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ರೈತ ಮುಖಂಡ ಜಗದೀಶ್, ಸ್ಥಳೀಯರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • quality-inspection

ಅರಕಲಗೂಡು:

ಪಟ್ಟಣದಲ್ಲಿ ಒಂದು ಕಿಮೀ ದೂರದ ತನಕ ಮುಖ್ಯ ರಸ್ತೆಯನ್ನು ಕೆಶಿಪ್ ವತಿಯಿಂದ 6.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಕೈಗೊಂಡಿರುವ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ ಎಂಬ ದೂರಿನನ್ವಯ ಇಲಾಖೆಯ ಗುಣಮಟ್ಟ ಪರಿಶೀಲನಾ ತಂಡ ಇತ್ತೀಚೆಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲನೆ ನಡೆಸಿತು.

ಬೆಂಗಳೂರು, ಮೈಸೂರು ಹಾಗೂ ಹಾಸನ ವಿಭಾಗಗಳಿಂದ ಆಗಮಿಸಿದ್ದ ಅಧಿಕಾರಿಗಳ ತಂಡ ಅರ್ಧ ಕಿ.ಮೀ. ತನಕ ರಸ್ತೆಗೆ ಅಳವಡಿಸಿರುವ ಡಾಂಬರ್ ಹಾಗೂ ುಟ್‌ಪಾತ್ ಕಾಮಗಾರಿಯನ್ನು ಯಂತ್ರಗಳಿಂದ ರಿಗ್ ಮಾಡಿ ಬಳಕೆಯಾಗಿರುವ ಡಾಂಬರ್, ಕಾಂಕ್ರೀಟ್ ಮಾದರಿಯನ್ನು ಸಂಗ್ರಹಿಸಿತು.
ಈ ವೇಳೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಅರಕಲಗೂಡು ಪಟ್ಟಣದಲ್ಲಿ ಕೈಗೊಳ್ಳಲಾಗಿರುವ ರಸ್ತೆ ಅಭಿವೃದ್ಧಿ ಹಾಗೂ ುಟ್ ಪಾತ್ ನಿರ್ಮಾಣ ಕಾಮಗಾರಿ ಅವೈಜ್ಞಾನಿಕ, ಗುಣಮಟ್ಟವಿಲ್ಲ. ಅಲ್ಲದೆ ಕೆಲವು ಕಡೆ ರಸ್ತೆ ಮತ್ತು ುಟ್‌ಪಾತನ್ನು ಡಿಪಿಆರ್ ಪ್ರಕಾರ ನಿರ್ವಹಿಸಿಲ್ಲ ಎಂಬುದಾಗಿ ದೂರು ಸಲ್ಲಿಕೆಯಾಗಿದೆ. ಈ ಸಲುವಾಗಿ ಕಾಮಗಾರಿ ತಪಾಸಣೆಗೆ ಬಂದಿದ್ದೇವೆ. ಹಲವು ಕಡೆ ಅಗತ್ಯ ಮಾಹಿತಿ, ಕಾಮಗಾರಿಗೆ ಬಳಕೆ ಮಾಡಿರುವ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಇವುಗಳನ್ನು ತಪಾಸಣೆಗೆ ಒಳಪಡಿಸಿ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರೈತ ಸಂಘದ ಮುಖಂಡ ಜಗದೀಶ್ ಮಾತನಾಡಿ, ತಪಾಸಣೆಯನ್ನು ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರ, ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದರೆ ಅನುಕೂಲವಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ಅವರು ಯಾರೂ ಸ್ಥಳದಲ್ಲಿ ಇಲ್ಲ. ಇದು ಬೇಕಾಬಿಟ್ಟಿ ತಪಾಸಣೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸಾರ್ವಜನಿಕ ದೂರಿನ ಅನ್ವಯ ಕಾಮಗಾರಿ ಗುಣಮಟ್ಟ ಪರೀಕ್ಷೆಗೆ ಬಂದಿದ್ದು, ಈ ವೇಳೆ ನಿಮ್ಮ ಆಕ್ಷೇಪಕ್ಕೆ ಉತ್ತರಿಸಲು ಆಗದು. ನಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ತಪಾಸಣಾ ಅಧಿಕಾರಿಗಳು ತಿಳಿಸಿದರು.
ತನಿಖಾ ತಂಡದ ಅಧಿಕಾರಿಗಳು ಕೇವಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಚನ್ನಬಸವೇಶ್ವರ ಸಮುದಾಯದ ತನಕ ರಸ್ತೆ, ುಟ್‌ಪಾತ್ ಕಾಮಗಾರಿ ತಪಾಸಣೆ ನಡೆಸಿದ್ದಾರೆ. ಆದರೆ ಉಳಿದ ಅರ್ಧ ಕಿಮೀ ದೂರದ ಕಾಮಗಾರಿಯನ್ನು ತಪಾಸಣೆಗೆ ಒಳಪಡಿಸಲಿಲ್ಲ. ಈ ಭಾಗದಲ್ಲಿ ಯಾವುದೇ ುಟ್‌ಪಾತ್ ನಿರ್ಮಿಸದೆ ಕೇವಲ ರಸ್ತೆಗೆ ಹೊಂದಿಕೊಂಡಂತೆ ಕಾಂಕ್ರೀಟ್ ಸುರಿದು ತೆರಳಲಾಗಿದೆ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಈ ಕಾಮಗಾರಿ ಪರಿಶೀಲನೆ ಮಾಡಿದ್ದರೆ ಗುತ್ತಿಗೆದಾರ, ಸಂಬಂಧಪಟ್ಟ ಇಂಜಿನಿಯರ್ ಅವರ ಕಳಪೆ ಕೆಲಸ ತಿಳಿಯುತ್ತಿತ್ತು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net