ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ

ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಪಾಲಾಕ್ಷ ನೇತೃತ್ವದಲ್ಲಿ ಶನಿವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಪಾಲಾಕ್ಷ ನೇತೃತ್ವದಲ್ಲಿ ಶನಿವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದರು.
Published on
ಬೇಲೂರು : ಮತದಾರರ ಪಟ್ಟಿಯಲ್ಲಿ ಶಿಕ್ಷಕರ ಹೆಸರನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ಬಿ.ಪಾಲಾಕ್ಷ ನೇತೃತ್ವದಲ್ಲಿ ಶನಿವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಮುಂದೆ ಶಿಕ್ಷಕರು ಪ್ರತಿಭಟನೆ ನಡೆಸಿದರು.
ಎಸ್.ಬಿ.ಪಾಲಾಕ್ಷ ಮಾತನಾಡಿ, ಶಿಕ್ಷಕರ ಸಂಘದ ಹಿಂದಿನವರ ಅಧಿಕಾರಾವಧಿ ಮುಗಿದ ಹಿನ್ನೆಲೆಯಲ್ಲಿ ಏ.1ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ನಿಯಮಾನುಸಾರ 45 ದಿನಗಳ ಮುಂಚೆಯೇ ಪ್ರಕ್ರಿಯೆ ಪ್ರಾರಂಭಿಸಬೇಕಿತ್ತು. ಚುನಾವಣೆ ಸಂಬಂಧ ಯಾವುದೇ ಸಭೆ, ಗೂಗಲ್ ಮೀಟ್‌ನಲ್ಲೂ ಚರ್ಚಿಸದೆ ಏ. 6 ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಎಂದು ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಅವರ ಹೆಸರಲ್ಲಿ ಕೊರಿಯರ್ ಮೂಲಕ ಸರ್ಕ್ಯೂಲರ್ ಬಂದಿದೆ.
ಅಧ್ಯಕ್ಷರು ಹೇಳಿದಂತೆ ತಾಲೂಕಿನ ಶಿಕ್ಷಕರ ಮತದಾರರ ಪಟ್ಟಿ ತಯಾರಿಸಿ 565 ಜನ ಶಿಕ್ಷಕರಲ್ಲಿ ಒಬ್ಬರನ್ನೂ ಬಿಡದೆ ಶಿಕ್ಷಕರ ಜಾಲತಾಣದಲ್ಲಿ ಪ್ರಕಟಿಸಿ ನಂತರ ದೃಢೀಕರಿಸಿ ಜಿಲ್ಲಾಧ್ಯಕ್ಷರ ಮೂಲಕ ರಾಜ್ಯ ಸಂಘಕ್ಕೆ ಕಳುಹಿಸಲಾಗಿದೆ. ಅಲ್ಲದೆ ಏ.10ರ ವರೆಗೂ ಚುನಾವಣೆ ಬಗ್ಗೆ ಮಾಹಿತಿ ಇರಲಿಲ್ಲ. ನಾವು ದೃಢೀಕರಿಸಿ ಕಳುಹಿಸಿದ್ದ ಮತದಾರರ ಪಟ್ಟಿಯನ್ನು ಜಿಲ್ಲಾಧ್ಯಕ್ಷರು, ಅಧ್ಯಕ್ಷರು ಅನುಮೋದಿಸಿ ನಮಗೆ ವಾಪಸ್ ಕಳುಹಿಸಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ ಎಂದು ಕಿಡಿಕಾರಿದರು.
ಸಂಘ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ರಘುಕುಮಾರ, ಎಚ್.ಆರ್.ರೂಪಾ, ಜಿ.ಜೆ.ಈರಯ್ಯ, ಎಸ್.ಬಿ.ಪಾಲಾಕ್ಷ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ ಅವರಿಗೆ ಬೇಡವಾದವರನ್ನು ಕೈಬಿಟ್ಟಿರುವುದು ಬೆಳಕಿಗೆ ಬಂದಿದೆ. ನಾನೇ ದೃಢೀಕರಿಸಿ ಕಳುಹಿಸಿದ್ದ ಪಟ್ಟಿಯಲ್ಲಿ ನನ್ನ ಹೆಸರೇ ಇಲ್ಲ ಎಂದರೆ ಹೇಗೆ? ಅಧ್ಯಕ್ಷ ಚಂದ್ರಶೇಖರ್ ನುಗ್ಲಿ, ಪ್ರಧಾನ ಕಾರ್ಯದರ್ಶಿ ಚೇತನ್ ಅವರು ತಂತ್ರಜ್ಞಾನ ಬಳಸಿ ಮತದಾರರ ಪಟ್ಟಿಯನ್ನು ಯಥವತ್ತಾಗಿ ತಯಾರಿಸಿದ್ದಲ್ಲದೆ, ನನ್ನ ಸಹಿಯಾನ್ನು ಸ್ಕ್ಯಾನ್ ಮಾಡಿ ಪುನಾ ನಮಗೆ ವಾಪಸ್ ಬೇರೆ ಪಟ್ಟಿ ಕಳುಹಿಸಿರುವುದು ನೋಡಿದರೆ ಹುನ್ನಾರ ಅರ್ಥವಾಗುತ್ತದೆ ಎಂದು ಆರೋಪಿಸಿದರು.
ಚುನಾವಣಾಧಿಕಾರಿಗೆ ಬೇಕಾದ ಪಟ್ಟಿಯನ್ನು ಅನುಮೋದಿಸಿ ನಾವು ಕೊಟ್ಟಿದೇವೆ. ಆದರೆ ಅಧಿಕಾರಿಗಳು ಈಗ ಅಧ್ಯಕ್ಷರ ಸಹಿ ಬೇಕು ಎನ್ನುತ್ತಾರೆ. ನಮ್ಮ ಪಟ್ಟಿಯನ್ನು ಅಧಿಕಾರಿಗಳು ಮಾನ್ಯ ಮಾಡದಿದ್ದಲ್ಲಿ ಚುನಾವಣೆ ಮುಂದೂಡಬೇಕು. ಇಲ್ಲವೇ ಹೊಂದಾಣಿಕೆ ಮೂಲಕ ಚುನಾವಣೆ ನಡೆಸಬೇಕು. ನಾವೂ ನಾಮಪತ್ರ ಸಲ್ಲಿಸುತ್ತೇವೆ. ಅದನ್ನು ತಿರಸ್ಕರಿಸುವುದು ಅಧಿಕಾರಿಗಳಿಗೆ ಬಿಟ್ಟದ್ದು, ನಾವು ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ನ್ಯಾಯಾಲಯ ಕೊಡುವ ತೀರ್ಮಾನಕ್ಕೆ ಬದ್ಧರಾಗುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಪ್ರಾಥಾಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಘುಕುಮಾರ, ಶಿಕ್ಷಕರಾದ ಈರಯ್ಯ.ಜಿ.ಜೆ, ಜಯಣ್ಣ, ರವಿ, ಪುಷ್ಪಾವತಿ, ಶ್ವೇತಾ, ರಜನಿಮೇರಿ, ವೇದಾ, ಯಲ್ಲೇಶ, ರತೀಶ, ಜ್ಯೋತಿರಾಣಿ, ರವೀಶ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net