ಆಲೂರು ಕಸಬಾ ಧರ್ಮಪುರಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ಡಿ.ಎನ್.ಗಣೇಶ್ ನೇತೃತ್ವದಲ್ಲಿ ಉಪ ತಹಸೀಲ್ದಾರ್ ಅಂಕೇಗೌಡ ಅವರಿಗೆ ಮನವಿ ಸಲ್ಲಿಸಿದರು. ಯೋಗೇಶ್, ನಾಗೇಶ್, ದಾಸೇಗೌಡ, ಸಂದೀಪ, ಮೋಹನ್, ಅಕ್ಕಯ್ಯಮ್ಮ, ಸಾವಿತ್ರಮ್ಮ ದ್ದರು.
ಆಲೂರು: ಗ್ರಾಮದ ಅವಶ್ಯಕತೆಗಾಗಿ ಮೀಸಲಿಟ್ಟಿರುವ ಜಾಗವನ್ನು ವ್ಯಕ್ತಿಯೊಬ್ಬರು ಖಾತೆ ಮಾಡಿಸಿಕೊಂಡಿದ್ದು, ಕೂಡಲೇ ಅದನ್ನು ಬಿಡಿಸಿ, ಗ್ರಾಮದ ಅಭಿವೃದ್ಧಿಗೆ ಮೀಸಲಿಡಬೇಕೆಂದು ಆಗ್ರಹಿಸಿ ಕಸಬಾ ಧರ್ಮಪುರಿ ಗ್ರಾಮಸ್ಥರು ಪಟ್ಟಣದ ಮಿನಿ ವಿದಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಗ್ರಾಮದ ಮುಖಂಡ ಗ್ರಾಮ ಪಂಚಾಯಿತಿ ಸದಸ್ಯ ಡಿ.ಎನ್.ಗಣೆಶ್ ಮಾತನಾಡಿ, 50 ವರ್ಷಗಳ ಹಿಂದೆ ಹೇಮಾವತಿ ಜಲಾಶಯದಲ್ಲಿ ಹಲವು ಗ್ರಾಮಗಳು ಹಾಗೂ ಜಮೀನು ಮುಳುಗಡೆಯಾದವು. ಈ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರಿಗೆ ಬ್ಯಾಬಾ ನಂ 4ನೇ ಕಾಲನಿ ಗ್ರಾಮದಲ್ಲಿ ಸರ್ಕಾರದಿಂದ ಜಮೀನು ಕೊಡಲಾಯಿತು. ಈ ಜಮೀನಿನಲ್ಲಿ ಗ್ರಾಮದ ಅಭಿವೃದ್ಧಿಗಾಗಿ 1.30 ಎಕರೆ ಪ್ರದೇಶವನ್ನು ಬಿಟ್ಟುಕೊಂಡಿದ್ದೆವು. ಈಗ ಈ ಜಾಗ 2023ರಲ್ಲಿ ಬೇರೊಬ್ಬರ ಹೆಸರಿಗೆ ಖಾತೆಯಾಗಿ ಪಹಣಿಯಲ್ಲಿ ದಾಖಲಾಗಿದೆ. ಜಾಗ ತೆರವುಗೊಳಿಸಬೇಕೆಂದು ತಹಸೀಲ್ದಾರ್, ಜಿಲ್ಲಾಧಿಕಾರಿ, ತಾಲೂಕು ಸರ್ವೇಯರ್‌ಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಕೂಡಲೇ ಸದರಿ ಜಾಗವನ್ನು ಗ್ರಾಮದ ಶ್ರೇಯೋಭಿವೃದ್ಧಿಗೆ ಬಿಡಿಸಿಕೊಡಬೇಕೆಂದು ಆಗ್ರಹಿಸಿದರು.