ಭಾಷೆ, ನೆಲ, ಜಲದ ರಕ್ಷಣ ನಮ್ಮ ಹೊಣೆ

 ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹುಟ್ಟು ಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಲಾಯಿತು. ಕಿರಣ್ ಕುಮಾರ್, ವಿವೇಕ್, ಗಂಗಾಧರ್, ಸಂತೋಷ್ ಸೇರಿದಂತೆ ಇತರರು ಇದ್ದರು.
ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹುಟ್ಟು ಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಲಾಯಿತು. ಕಿರಣ್ ಕುಮಾರ್, ವಿವೇಕ್, ಗಂಗಾಧರ್, ಸಂತೋಷ್ ಸೇರಿದಂತೆ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Protecting language
ಅರಸೀಕೆರೆ: ಕನ್ನಡ ಭಾಷೆ, ನೆಲ, ಜಲದ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
ಸಂಘಟನೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಬುಧವಾರ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಪರಿಕರ ವಿತರಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ಗಧಾಪ್ರಹಾರ ತಡೆಯಲು ಎಲ್ಲರೂ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಕೆಲ ನಗರಗಳಲ್ಲಿ ಅನ್ಯಭಾಷಿಕರು ಪುಂಡಾಟಿಕೆ ಮೆರೆಯುತ್ತಿರುವ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ನಾಡು, ನುಡಿಯ ರಕ್ಷಣೆಗಾಗಿ ಕರವೇ ನಿರಂತರ ಹೋರಾಟ ನಡೆಸುತ್ತಿದ್ದು ಎಲ್ಲರೂ ಕೈ ಜೋಡಿಸೋಣ ಎಂದು ಹೇಳಿದರು.
ವಕೀಲ ವಿವೇಕ್ ಮಾತನಾಡಿ, ಸಂಘಟನೆ ಕಟ್ಟುವುದು ಸುಲಭದ ಕೆಲಸವಲ್ಲ. ಹಾಗೆಯೇ ಉಳಿಸಿ ಬೆಳೆಸುವ ಕಾಯಕವೂ ಕಠಿಣವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ದಿಟ್ಟ ಹೆಜ್ಜೆ ಇರಿಸಿರುವುದು ಶ್ಲಾಘನೀಯ. ಕನ್ನಡ ಭಾಷೆ ,ನೆಲ, ಜಲದ ಉಳಿವಿಗೆ ನಡೆಯುವ ಹೋರಾಟಕ್ಕೆ ಎಲ್ಲರೂ ಬೆಂಬಲ ನೀಡೋಣ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಸದಸ್ಯ ಹೊಸೂರು ಗಂಗಾಧರ್, ವೈದ್ಯ ನಾಗಭೂಷಣ್ ರಾವ್, ಕರವೇ ನಗರ ಅಧ್ಯಕ್ಷ ಸಂತೋಷ್, ಯುವ ಘಟಕದ ಅಧ್ಯಕ್ಷ ರಕ್ಷಿತ್, ಉಪಾಧ್ಯಕ್ಷ ನವೀನ್, ಖಜಾಂಚಿ ಸುನಿಲ್ ಕುಮಾರ್, ಉಮೇಶ್, ಗಂಜಿಗೆರೆ ಚಂದ್ರಶೇಖರ್, ನಗರಸಭೆ ಮಾಜಿ ಸದಸ್ಯರಾದ ವೆಂಕಟಮನಿ, ಬಾಲು ಮುರುಗನ್, ರಮೇಶ್, ಕರವೇ ಗೌರವ ಅಧ್ಯಕ್ಷ ಲಕ್ಷ್ಮೀಶ್, ಮುದುಡಿ ಗಂಗಾಧರ್, ರಾಘವೇಂದ್ರ, ಪರಮೇಶ್, ನಿವೃತ್ತ ಪಿಎಸ್ ಐ ಮಂಜೇಗೌಡ, ರಾಘು, ಲೋಕೇಶ್, ಅರ್ಜುನ್ ಗೌಡ, ನಂದ ಕುಮಾರ್, ಅಶ್ವಥ್, ಶಿವು, ಶೇಖರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net