ಫೆ.1ರಂದು ಶೋಭಾಯಾತ್ರೆ

ಚನ್ನರಾಯಪಟ್ಟಣ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಫೇ.1ರಂದು  ಆಯೋಜಿಸಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಕುರಿತು ಸಮಿತಿ ಅಧ್ಯಕ್ಷ ಶಿವಶಂಕರ್ ಮಾಹಿತಿ ನೀಡಿದರು.
ಚನ್ನರಾಯಪಟ್ಟಣ ಹಿಂದೂ ಸಮಾಜೋತ್ಸವ ಸಮಿತಿ ವತಿಯಿಂದ ಫೇ.1ರಂದು ಆಯೋಜಿಸಿರುವ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಕುರಿತು ಸಮಿತಿ ಅಧ್ಯಕ್ಷ ಶಿವಶಂಕರ್ ಮಾಹಿತಿ ನೀಡಿದರು.
Published on
ಚನ್ನರಾಯಪಟ್ಟಣ: ದೇಶದ ಹಿಂದೂಗಳ ಜಾಗೃತಿಗಾಗಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಆಚರಣೆ ಅಂಗವಾಗಿ ತಾಲೂಕು ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವತಿಯಿಂದ ಫೆ.1ರಂದು ಹಿಂದೂ ಸಮಾಜೋತ್ಸವ ಸಭಾ ಕಾರ್ಯಕ್ರಮ ಮತ್ತು ಶೋಭಾಯಾತ್ರೆಯನ್ನು ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಸಮಿತಿ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ದೇಶ ಪ್ರೇಮ, ಸನಾತನ ಪರಂಪರೆ ಹಾಗೂ ಭಾರತೀಯತೆಯ ಅಸ್ಮಿತೆಗಳನ್ನು ಉಳಿಸಿ, ಬೆಳೆಸುವ ಧ್ಯೇಯದಿಂದ ಪ್ರಾರಂಭಗೊಂಡ ಈ ಸಂಘಟನೆಗೆ ಈಗ ನೂರು ವರ್ಷಗಳು ಕಳೆದಿದೆ. ಮುಂದಿನ ತಲೆಮಾರಿನ ಸುರಕ್ಷತೆ ಹಾಗೂ ನೆಮ್ಮದಿಯ ಬಾಳಿಗಾಗಿ ಹಿಂದೂಗಳಲ್ಲಿ ಸಂಘಟನೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಅಂದು ಬೆಳಗ್ಗೆ 9 ಗಂಟೆಗೆ 40 ಅಡಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಗೋ ಪೂಜೆ, ಸಪ್ತನದಿಗಳ ತೀರ್ಥ ವಿತರಣೆ ನಂತರ ಶ್ರೀರಾಮತಾರಕ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಲಿದೆ. ಜತೆಗೆ ಬೃಹತ್ ಬೈಕ್ ರ‌್ಯಾಲಿ ಏರ್ಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದೂ ಧರ್ಮದ ಉಳಿವು, ಮೌಲ್ಯತೆಯ ಜಾಗೃತಿ ಹೆಚ್ಚಿಸುವ ಸಲುವಾಗಿ ಸಮಾಜೋತ್ಸವ ಆಯೋಜಿಸಿಲಾಗಿದೆ. ಮಧ್ಯಾಹ್ನ 3 ಗಂಟೆಗೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಶೋಭಯಾತ್ರೆ ಆರಂಭವಾಗಿ ಕೃಷ್ಣರಾಜೇಂದ್ರ ವೃತ್ತ, ನವೋದಯ ವೃತ್ತದ ಮುಖಾಂತರ ಮೈಸೂರು ರಸ್ತೆಯಲ್ಲಿ ಸಾಗಿ ಆಸ್ಪತ್ರೆ ವೃತ್ತದ ಮಾರ್ಗವಾಗಿ ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ಅಂತ್ಯಗೊಳ್ಳಲಿದೆ. ಶೋಭಾಯಾತ್ರೆ ಬಳಿಕ ಮಾಧ್ಯಮಿಕ ಶಾಲಾ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುರವರ್ಗ ಹಿರೇಮಠದ ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ಮತ್ತು ಆಶೀರ್ವಚನ ನೀಡಲಿದ್ದಾರೆ. ತಾಲೂಕಿನ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದು, ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಗೋವಿಂದ ಜೀ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ 2500ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಮುಖಂಡ ಸಿ.ಎಸ್.ಮನೋಹರ್, ಹಿಂದೂ ಸಮಾಜೋತ್ಸವ ಸ್ಥಾಯಿ ಸಮಿತಿಯ ಸಹ ಸಂಯೋಜಕ ಸಿ.ಎಂ.ರೂಪ ಮನೋಹರ್, ಸದಸ್ಯರಾದ ಜಾನಕಿ ರವೀಂದ್ರ ಕುಮಾರ್, ರೂಪಾ ಸಂತೋಷ್, ಡಾ.ಶೇಷಶಯನ, ಮೋಹನ್, ಆನಂದ್ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net