ಕಾಳೇನಹಳ್ಳಿ ಸಮಗ್ರ ಅಭಿವೃದ್ಧಿಗೆ ಆದ್ಯತೆ

ಚನ್ನರಾಯಪಟ್ಟಣ ತಾಲೂಕು ಡಿ.ಕಾಳೇನಹಳ್ಳಿ ಗ್ರಾಮದಲ್ಲಿನ ಕೇಂದ್ರ ಸ್ಥಾನ ಲಕ್ಷ್ಮೀದೇವಿ ದೇವಸ್ಥಾನದ ಆವರಣದ ರಸ್ತೆ ಕ್ರಾಂಕೀಟೀಕರಣಕ್ಕೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೇರವೇರಿಸಿದರು. ಜಗದೀಶ್, ಆನಂದ್, ಶಂಕರ್ ಇತರರು ಇದ್ದರು.
ಚನ್ನರಾಯಪಟ್ಟಣ ತಾಲೂಕು ಡಿ.ಕಾಳೇನಹಳ್ಳಿ ಗ್ರಾಮದಲ್ಲಿನ ಕೇಂದ್ರ ಸ್ಥಾನ ಲಕ್ಷ್ಮೀದೇವಿ ದೇವಸ್ಥಾನದ ಆವರಣದ ರಸ್ತೆ ಕ್ರಾಂಕೀಟೀಕರಣಕ್ಕೆ ಶಾಸಕ ಬಾಲಕೃಷ್ಣ ಭೂಮಿ ಪೂಜೆ ನೇರವೇರಿಸಿದರು. ಜಗದೀಶ್, ಆನಂದ್, ಶಂಕರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Kalenahalli
ಚನ್ನರಾಯಪಟ್ಟಣ: ಪಟ್ಟಣಕ್ಕೆ ಹೊಂದಿಕೊಂಡಂತ್ತಿರುವ ಡಿ.ಕಾಳೇನಹಳ್ಳಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಕಸಬಾ ಹೋಬಳಿ ಡಿ.ಕಾಳೇನಹಳ್ಳಿ ಗ್ರಾಮದ ಕೇಂದ್ರಭಾಗದಲ್ಲಿರುವ ಲಕ್ಷ್ಮೀದೇವಿ ದೇವಾಲಯದ ಮುಂಭಾಗದ ಪ್ರಾಂಗಣಕ್ಕೆ ಕಾಂಕ್ರೀಟ್ ನೆಲಹಾಸು ನಿರ್ಮಾಣಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಡಿ.ಕಾಳೇನಹಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಗ್ರಾಮ ಡಿ.ಕಾಳೇನಹಳ್ಳಿ. ಗ್ರಾಮದಲ್ಲಿ ಶೇ.90 ರಷ್ಟು ಅವಶ್ಯವಿರುವ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಪಟ್ಟಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಿ.ಎಂ.ರಸ್ತೆಯಿಂದ, ಮೈಸೂರು ರಸ್ತೆಯಿಂದ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳು, ತಗ್ಯಮ್ಮ ಬಡವಾಣೆಯಿಂದ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿಸಲಾಗಿದೆ. ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಿರುವ ಸಮುದಾಯ ಭವನದ ಹೆಚ್ಚುವರಿ ಕೆಲಸಗಳಿಗಾಗಿ ಮುಂದಿನ ತಿಂಗಳೊಳಗೆ 5 ಲಕ್ಷ ರೂ. ಅನುದಾನ ನೀಡಲಾಗುವುದು. ಇದರೊಂದಿಗೆ ಶಿಥಿಲಗೊಂಡಿರುವ ರಾಮಮಂದಿರದ ಅಭಿವೃದ್ಧಿಗಾಗಿ ಶೀಘ್ರ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜೆಜೆಎಂಗಾಗಿ ಜಾಗದ ಕೊರತೆಯಿಂದ ಓವರ್‌ಹೆಡ್ ಟ್ಯಾಂಕ್ ನಿರ್ಮಾಣವಾಗಿಲ್ಲ, ಗ್ರಾಮಸ್ಥರು ಸೇರಿ ಸೂಕ್ತ ಜಾಗ ಗುರುತಿಸಿದಲ್ಲಿ ಶೀಘ್ರ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ನೀರು ಒದಗಿಸಲಾಗುವುದು ಎಂದರು.
ಟಿಪಿಎಸಿಎಂಎಸ್ ನಿರ್ದೇಶಕ ಅನಿಲ್‌ಕುಮಾರ್, ಗುತ್ತೀಗೆದಾರರ ಸಂಘದ ಅಧ್ಯಕ್ಷ ಜಗದೀಶ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ಆನಂದ್ ಕಾಳೇನಹಳ್ಳಿ, ಪಿಎಸಿಸಿಎಸ್ ಅಧ್ಯಕ್ಷ ಶಂಕರ್, ಮಾಜಿ ಅಧ್ಯಕ್ಷರಾದ ರಂಗಸ್ವಾಮಿ, ಮಂಜಪ್ಪ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟೇಶ್, ಶಂಕರ್, ಕುಮಾರ್, ಅಡಗೂರು ಗ್ರಾಮದ ಮುಖಂಡ ನಾರಾಯಣಿ, ಮುಖಂಡರಾದ ನಾಗಣ್ಣಯ್ಯ, ಪ್ರಕಾಶ್, ನಾಗೇಂಧ್ರ, ಬಾಬು, ಸ್ವಾಮಿ, ಕೆಟಿ ಚಂದ್ರ, ನಾಗೇಶ್, ಶಿವಪ್ರಕಾಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net