‘ಉಜ್ಜಯಿನಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ’ ಪೂರ್ವಭಾವಿ ಸಭೆ

ಉಜ್ಜಯಿನಿ ಪೀಠದ 1008 ಶ್ರೀಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಬೇಲೂರಿನಲ್ಲಿ ಆಯೋಜಿಸಿದ್ದ ಪೂರ್ವಭಾಗಿ ಸಭೆಯಲ್ಲಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಎ.ಎಸ್.ಬಸವರಾಜ್, ಹೆಬ್ಬಾಳು ಹಾಲಪ್ಪ, ವಿಂಪು ಸಂತೋಷ್ ಇತರರು ಇದ್ದರು.
ಉಜ್ಜಯಿನಿ ಪೀಠದ 1008 ಶ್ರೀಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಬೇಲೂರಿನಲ್ಲಿ ಆಯೋಜಿಸಿದ್ದ ಪೂರ್ವಭಾಗಿ ಸಭೆಯಲ್ಲಿ ಸಭೆಯಲ್ಲಿ ಕರಪತ್ರ ಬಿಡುಗಡೆಗೊಳಿಸಲಾಯಿತು. ಎ.ಎಸ್.ಬಸವರಾಜ್, ಹೆಬ್ಬಾಳು ಹಾಲಪ್ಪ, ವಿಂಪು ಸಂತೋಷ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Ujjayini Sri
  • addapallakki-utsava
ಬೇಲೂರು: ವೀರಶೈವ ಲಿಂಗಾಯತ ಜಂಗಮ ಪುರೋಹಿತ ಅರ್ಚಕರ ಸಂಘದಿಂದ ಸೆ.30, ಅ. 1 ರಂದು ಉಜ್ಜಯಿನಿ ಪೀಠದ 1008 ಶ್ರೀಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಅಡ್ಡ ಪಲ್ಲಕ್ಕಿ ಮಹೋತ್ಸವ, ಧರ್ಮ ಜಾಗೃತಿ ಸಮಾವೇಶದ ಅಂಗವಾಗಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಪೂರ್ವಭಾವಿ ಸಭೆ ಜರುಗಿತು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಎ.ಎಸ್.ಬಸವರಾಜ್ ಮಾತನಾಡಿ, ಬೇಲೂರಿನಲ್ಲಿ ಈಗಾಗಲೇ ಪುಷ್ಪಗಿರಿ ಮಹೋತ್ಸವ, ತರಳಬಾಳು ಮಹೋತ್ಸವ, ರಂಭಾಪುರಿ ದಸರಾ ಉತ್ಸವಗಳು ಯಶಸ್ವಿಯಾಗಿ ನಡೆದಿವೆ. ಇದೇ ಮಾದರಿಯಲ್ಲಿ ಉಜ್ಜಯಿನಿ ಜಗದ್ಗುರುಗಳ ಪ್ರಥಮ ಪುರ ಪ್ರವೇಶಕ್ಕಾಗಿ ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸಿ ಯುವ ಪೀಳಿಗೆಯಲ್ಲಿ ಧರ್ಮ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.
ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಧರ್ಮಾಚರಣೆ ಕುಂಠಿತವಾಗುದ್ದು, ಯುವಜನರಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಮೌಲ್ಯಗಳ ಅರಿವು ಮೂಡಿಸಬೇಕಿದೆ ಎಂದರು.
ವೀರಶೈವ ಲಿಂಗಾಯತ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವಿಂಪು ಸಂತೋಷ್ ಮಾತನಾಡಿ, ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದಲ್ಲಿ ಮಹಿಳಾ ತಂಡದಿಂದ ಪೂರ್ಣಕುಂಭ ಸ್ವಾಗತಕ್ಕೆ ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾಲೂಕು ಪುರೋಹಿತ ಅರ್ಚಕರ ಸಂಘದ ಅಧ್ಯಕ್ಷ ವಿರೂಪಾಕ್ಷ ಶಾಸಿ, ಪುರೋಹಿತರ ಸಂಘದ ಜಿಲ್ಲಾಧ್ಯಕ್ಷ ದೇವರಾಜ ಶಾಸ್ತ್ರಿ, ಕಟ್ಟಾಯ ಶಿವಕುಮಾರ್, ಶಿವಮೂರ್ತಿ, ಎಚ್.ಎಂ.ದಯಾನಂದ್, ಮದನ್, ಅದ್ದೂರಿ ಚೇತನ್, ಗೆಂಡೇಹಳ್ಳಿ ಚೇತನ್, ವಿರೂಪಾಕ್ಷ, ಸದಾಶಿವಯ್ಯ, ಉಮೇಶಯ್ಯ, ವಿಜಯಕುಮಾರ ಶಾಸಿ, ಮಲ್ಲೇಶ ಶಾಸಿ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net